ವಿಜಯಪುರ: ಅಕ್ರಮವಾಗಿ ಮಾವಾ ತಯಾರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, 1,61,420 ರೂ.ಗಳ ಮೌಲ್ಯದ 19 ಕೆಜಿ ಮಾವಾ, 360 ಕೆಜಿ ಅಡಿಕೆ ಚೂರಿ, ತಂಬಾಕು ಸೇರಿದಂತೆ ಕಚ್ಚಾ ವಸ್ತುಗಳನ್ನು ಜಪ್ತಿ ಮಾಡಿದ ಘಟನೆ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಮಂಗಳವಾರ ನಡೆದಿದೆ.
ಇಲ್ಲಿನ ಮುಬಾರಕ್ ಮಕ್ಬುಲ್ ಬಾಗವಾನ್ (28), ಬಬಲು ಉರ್ಫ್ ದಸ್ತಗೀರ್ ಇಸ್ಮಾಯಿಲ್ ದಪೇದಾರ್ (22) ಬಂಧಿತ ಆರೋಪಿಗಳು.
ಈ ಇಬ್ಬರು ಆರೋಪಿಗಳು ಇಲ್ಲಿನ ಜೇಡಿಮಠ ಓಣಿಯ ಕೋಣೆಯೊಂದರಲ್ಲಿ ಅಕ್ರಮವಾಗಿ ಮಾವಾ ತಯಾರಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಮಾವಾ ಸೇರಿದಂತೆ ಕಚ್ಚಾ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ದೇವರಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.