Sunday, August 14, 2022

Latest Posts

ವಿಜಯಪುರ| ಮೂವರ ದರೋಡೆಕೋರರ ಬಂಧನ, 8.35 ಲಕ್ಷ ರೂ.ಗಳ ಜಪ್ತಿ

ವಿಜಯಪುರ: ಕಡಿಮೆ ಬೆಲೆಯಲ್ಲಿ ಚಿನ್ನ ನೀಡುವ ಆಸೆ ತೋರಿಸಿ ದಂಪತಿ ಮೇಲೆ ಹಲ್ಲೆ ನಡೆಸಿ, 9 ಲಕ್ಷ ನಗದು ಹಾಗೂ 89 ಸಾವಿರ ಮೌಲ್ಯದ ಚಿನ್ನಭರಣ ದೋಚಿಕೊಂಡು ಪರಾರಿಯಾಗಿದ್ದ 9 ಜನ ದರೋಡೆಕೋರರ ಪೈಕಿ ಮೂವರನ್ನು ಬಂಧಿಸಲಾಗಿದ್ದು, 8.35 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರೇಬೇವನೂರ ಗ್ರಾಮದವರಾದ ಸಾಯಬಣ್ಣ ಹರಣಶಿಕಾರಿ (42), ಪರಮಾನಂದ ಹರಣಶಿಕಾರಿ (23), ಕಿಟ್ಟ್ಯಾ ಹರಣಶಿಕಾರಿ ಬಂಧಿತ ಆರೋಪಿಗಳಾಗಿದ್ದು, ಇನ್ನು 6 ಜನರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.
ಹೈದರಾಬಾದ್‌ನ ಸುನೀಲ ಪ್ರಲ್ಹಾದ ಜಾಧವ ಹಾಗೂ ರಾಜಶ್ರೀ ಜಾಧವ ದಂಪತಿಗೆ, ಕಳೆದ ಎರಡು ತಿಂಗಳಿಂದ ಬಾಗಮ್ಮ ಎನ್ನುವವಳು ತನ್ನ ಬಳಿ 7-8 ಕಿಲೋ ಬಂಗಾರವಿದ್ದು, ಕಡಿಮೆ ಬೆಲೆಯಲ್ಲಿ ನೀಡುವೆ, ಹಣ ತೆಗೆದುಕೊಂಡು ಬನ್ನಿ ಎಂದು ಆಸೆ ತೋರಿಸಿದ್ದಾಳೆ. ಈ ದಂಪತಿಗಳು ಜೂ.12, 2020 ರಂದು ಹೈದರಾಬಾದನಿಂದ ಜಿಲ್ಲೆಯ ಆಲಮೇಲ ಬಳಿ ಬಂದಾಗ, ಅನಂತರ ದಂಪತಿಯನ್ನು ಕರಬತ್ತಳ್ಳಿ ಕಾಸ್ ಹತ್ತಿರದ ಹೊಲವೊಂದಕ್ಕೆ ಕರೆಸಿಕೊಂಡು 9 ಜನ ದರೋಡೆಕೋರರು ಸೇರಿಕೊಂಡು, ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ 9 ಲಕ್ಷ ನಗದು ಹಾಗೂ ರಾಜಶ್ರೀ ಕೊರಳಲ್ಲಿದ್ದ ಒಂದು ತೊಲಿ ಬಂಗಾರದ ಭೋರಮಾಳ, ಒಂದು ತೊಲಿ ಬಂಗಾರದ ಮಂಗಳಸೂತ್ರ, ಕಿವಿಯೋಲಿ, ಕಾಲುಚೈನು ಸೇರಿದಂತೆ ಅಂದಾಜು 89 ಸಾವಿರ ಮೌಲ್ಯದ ಚಿನ್ನಭರಣ ಹಾಗೂ ಮೊಬೈಲ್‌ಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಆಲಮೇಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆಗೆ ಮುಂದಾದಾಗ, ಹಿರೇಬೇವನೂರ ಗ್ರಾಮದ ಬಳಿ ತನಿಖಾ ತಂಡಕ್ಕೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ ಎಂದರು.
ಇಂಡಿ ಡಿವೈಎಸ್‌ಪಿ ಎಂ.ಬಿ. ಸಂಕದ, ಸಿಂದಗಿ ಸಿಪಿಐ ಸತೀಶಕುಮಾರ ಕಾಂಬಳೆ, ಆಲಮೇಲ ಪಿಎಸ್‌ಐ ಎನ್.ಎಚ್. ಪೂಜೇರಿ ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss