Wednesday, June 29, 2022

Latest Posts

ವಿಜಯಪುರ| ರಾಜ್ಯೋತ್ಸವ ಸಂಭ್ರಮದ ಮಧ್ಯೆ ಕೋವಿಡ್, ನೆರೆ ಸಂಕಷ್ಟ: ಸಚಿವೆ ಜೊಲ್ಲೆ

ವಿಜಯಪುರ: ರಾಜ್ಯೋತ್ಸವದ ಸಂತಸ ಒಂದೆಡೆಯಾದರೆ, ಮತ್ತೊಂದೆಡೆ ಕೋವಿಡ್ ಸಂಕಷ್ಟ ಹಾಗೂ ನೆರೆ ಆವಾಂತರ ಸೃಷ್ಟಿಯಾಗಿರುವುದು ಖೇದಕರ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ವೇಳೆ ಲಕ್ಷ್ಯಕ್ಕೂ ಮೇಲ್ಪಟ್ಟು ಗಂಟಲು ದ್ರವ ಪರೀಕ್ಷೆ ಮಾಡಿದ್ದೇವೆ. ಇದರಲ್ಲಿ 12 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಬಂದಿವೆ ಎಂದರು.ಮಹಾರಾಷ್ಟ್ರದಿಂದ ನೀರು ಬಿಟ್ಟ ಹಿನ್ನೆಲೆ, ಭೀಮಾತೀರ ಪ್ರವಾಹಕ್ಕೆ ತುತ್ತಾಗಬೇಕಾಯಿತು ಎಂದರು.

ಜಿಲ್ಲೆಯ 10 ತಾಲೂಕನ್ನು ಈಗಾಗಲೇ ಪ್ರವಾಹ ಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಇನ್ನುಳಿದ ಎರಡು ತಾಲೂಕನ್ನು ಪ್ರವಾಹ ಪೀಡಿತ ತಾಲೂಕೆಂದು ಘೋಷಣೆ ಮಾಡಲಾಗುವುದು, ಬಹುತೇಕ ಕುಟುಂಬಗಳಿಗೆ ಈಗಾಗಲೇ 10 ಸಾವಿರ ರೂ.ಗಳನ್ನು ನೀಡಲಾಗಿದೆ ಎಂದರು.

2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಹಾಗೂ ಕೃಷಿ ಬೆಳೆ ಹಾನಿ ಸೇರಿದಂತೆ 240 ಕೋಟಿ ಹಾನಿಯಾಗಿದ್ದು, ಅದನ್ನು ಎನ್ ಡಿ ಆರ್ ಎಫ್ ನಿಂದ ಭರಿಸುವ ಯೋಜನೆಯಿದೆ ಎಂದರು.

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ತಡೆ ಹಿಡಿಯಲಾದ 125 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ಉತ್ತರ ಕರ್ನಾಟಕಕ್ಕೆ ಪರಿಹಾರ ಕಡಿಮೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ, ಈ ರೀತಿ ತಾರತಮ್ಯ ಮಾಡುವುದು ಸರಿ ಅಲ್ಲ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ, ಎಲ್ಲಡೆ ಸರಿ ಸಮನಾಗಿ ಪರಿಹಾರ ಕೊಡಬೇಕು ಎನ್ನುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡುವೆ ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪ 3 ವರ್ಷ ಸಿಎಂ ಆಗಿ ಇರುತ್ತಾರೆ ಎನ್ನುವ ಕುರಿತು ಬಸನಗೌಡ ಪಾಟೀಲ ಯತ್ನಾಳ ಅನುಮಾನ ವ್ಯಕ್ತಪಡಿಸಿರುವ ವಿಚಾರಕ್ಕೆ, ಯತ್ನಾಳ ಅಣ್ಣಾರಿಗೆ ಯಾಕ ಹಿಂಗ ಅನಿಸಾಕತ್ತೈತಿ ಗೊತ್ತಿಲ್ಲ. ಆದರೆ 3 ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಇರುತ್ತಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss