Monday, August 15, 2022

Latest Posts

ವಿಜಯಪುರ| ಲಾರಿಯಲ್ಲಿ ಅಫೀಮು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ, 4 ಕೆಜಿ ಅಫೀಮ್ ಜಪ್ತಿ

ವಿಜಯಪುರ: ನಗರ ಹೊರ ವಲಯ ಹಿಟ್ನಳ್ಳಿ ಟೋಲ್ ಗೇಟ್ ಬಳಿ ಅಕ್ರಮವಾಗಿ ಮಾರಾಟ ಮಾಡಲು ಲಾರಿಯಲ್ಲಿ ಅಫೀಮು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಅಬಕಾರಿ ಪೊಲೀಸರು 4 ಕೆಜಿ ಅಫೀಮ್ ಕಾಯಿ, 1 ಕೆಜಿ ಅಫೀಮ್ ಪೌಡರ್ ಸೇರಿದಂತೆ ಲಾರಿಯನ್ನು ಜಪ್ತಿ ಮಾಡಿದ್ದಾರೆ.
ರಾಜಸ್ಥಾನ್‌ದ ಮುನಿರಾಮ ಬಸ್ತಿರಾಮ ಬಿಸನೋಯಿ, ಪೂನಮಚಾಂದ್ ಸುಲ್ತಾನರಾಮ ಬಿಸನೋಯಿ ಬಂಧಿತ ಆರೋಪಿಗಳು.
ಮುನಿರಾಮ ಬಿಸನೋಯಿ, ಪೂನಮಚಾಂದ್ ಬಿಸನೋಯಿ ಈ ಇಬ್ಬರು 18 ಚಕ್ರದ ಲಾರಿಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು 4 ಕೆಜಿ ಅಫೀಮ್ ಗಿಡದ ಕಾಯಿ ಹಾಗೂ 1 ಕೆಜಿ ಅಫೀಮ್ ಪೌಡರ್ ಸಾಗಣೆ ಮಾಡುತ್ತಿದ್ದ ವೇಳೆ ಅಬಕಾರಿ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿ, ಲಾರಿಯನ್ನು ಜಪ್ತಿ ಮಾಡಿದ್ದಾರೆ.
ಅಬಕಾರಿ ಜಂಟಿ ಆಯುಕ್ತ ಡಾ.ವೈ. ಮಂಜುನಾಥ ಹಾಗೂ ಅಬಕಾರಿ ಉಪ ಆಯುಕ್ತ ಎ. ರವಿಶಂಕರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss