Sunday, August 14, 2022

Latest Posts

ವಿಜಯಪುರ: ವಾಹನ ಡಿಕ್ಕಿಯಾಗಿ 29 ಕುರಿಗಳ ಸಾವು

ವಿಜಯಪುರ: ಅಪರಿಚಿತ ವಾಹನ ಡಿಕ್ಕಿಯಾಗಿ ಲಕ್ಷಾಂತರ ಮೌಲ್ಯದ 29 ಕುರಿಗಳು ಸಾವಿಗೀಡಾದ ಘಟನೆ ಜಿಲ್ಲೆಯ ಕಲಕೇರಿ ಹತ್ತಿರದ ಬಸ್ತಿಹಾಳ ಕ್ರಾಸ್ ಬಳಿ ಭಾನುವಾರ ತಡ ರಾತ್ರಿ ನಡೆದಿದೆ.
ಫತ್ತೇಪೂರ ಗ್ರಾಮದ ಹಳ್ಯಪ್ಪ ಎಂಬ ಕುರಿಗಾಯಿಗೆ ಸೇರಿದ ಕುರಿಗಳಾಗಿದ್ದು, ಯರಗಲ್ಲ ಗ್ರಾಮದಿಂದ ಫತ್ತೇಪೂರ ಗ್ರಾಮಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ.
ಈ ಸಂಬಂಧ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss