Friday, August 12, 2022

Latest Posts

ವಿಜಯಪುರ| ಸಿಪಿಐ ರವೀಂದ್ರ ನಾಯ್ಕೋಡಿ ಸಹಿತ ನಾಲ್ವರಿಗೆ ಸಿಎಂ ಪದಕ

ಹೊಸ ದಿಗಂತ ವರದಿ ವಿಜಯಪುರ:

ವಿಜಯಪುರ ಜಿಲ್ಲೆಯಿಂದ 2017, 2018ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಮೂರು ಪೊಲೀಸ್ ಅಧಿಕಾರಿಗಳು ಹಾಗೂ ಓರ್ವ ಸಿಬ್ಬಂದಿ ಆಯ್ಕೆಯಾಗಿದ್ದಾರೆ.

ನಗರದ ಗಾಂಧಿಚೌಕ್ ಠಾಣೆ ಸಿಪಿಐ (ಎಸ್ ಐಟಿ) ರವೀಂದ್ರ ನಾಯ್ಕೋಡಿ, ಡಿಸಿಐಬಿ ಪಿಎಸ್ ಐ ಜಯವಂತ ದುಲಾರಿ (ಕೆಎಲ್ ಎಗೆ ವರ್ಗ), ಆದರ್ಶ ನಗರ ಪೊಲೀಸ್ ಠಾಣೆ ಎಎಸ್ ಐ ಸಿದ್ರಾಮ ಮಾಳೇಗಾಂವ್ ಹಾಗೂ ಎಪಿಎಂಸಿ ಪೊಲೀಸ್ ಠಾಣೆ ಸಿಬ್ಬಂದಿ ಶಿವಾನಂದ ಅಳ್ಳಿಗಿಡದ ಅವರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಗೊಂಡಿದ್ದು, ಬೆಂಗಳೂರಿನ ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ನ.20, 2020 ರಂದು ಬೆಳಗ್ಗೆ 9 ಗಂಟೆಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪದಕ ಪ್ರದಾನ ಮಾಡಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss