Saturday, July 2, 2022

Latest Posts

ವಿಜಯಪುರ: ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ 12 ಮಂದಿ ಕ್ವಾರಂಟೈನ್

ವಿಜಯಪುರ: ಅಫ್ಜಲಪೂರ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದ ಸಿಂದಗಿ ತಾಲೂಕಿನ 12 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಮೇ 10 ರಂದು ಬಂದ ಹೆಲ್ತ್ ಬುಲೆಟಿನ್ ನಲ್ಲಿ ಕಲಬುರಗಿ ಜಿಲ್ಲೆ ಅಫ್ಜಲಪುರ ತಾಲೂಕಿನಲ್ಲಿ ಓರ್ವನಿಗೆ (ಪಿ.805) ಕರೋನಾ ಸೋಂಕು ದೃಢಪಟ್ಟಿತ್ತು. ಈ ಸೋಂಕಿತ ವ್ಯಕ್ತಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಎರಡು ಗ್ರಾಮಗಳಲ್ಲಿ ಸಂಚಾರ ನಡೆಸಿದ್ದರಿಂದ ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನ ಕ್ವಾರಂಟೈನ್ ಮಾಡಲಾಗಿದೆ.

ಪಿ.805 ಸೋಮಜಾಳ ಹಾಗೂ ಬೊಮ್ಮನಹಳ್ಳಿ ಗ್ರಾಮಕ್ಕೆ ಬಂದು ಹೋಗಿದ್ದಾನೆ. ಹೀಗಾಗಿ ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 12 ಜನರನ್ನ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.

ಮೇ 4 ರಂದು ಬೊಮ್ಮನಳ್ಳಿ ಗ್ರಾಮದಲ್ಲಿ ಒಬ್ಬರ ಮನೆಯಲ್ಲಿ ಊಟ ಮಾಡಿದ್ದಾನೆ.ಆ ಮನೆಯ ನಾಲ್ಕು ಜನರು ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಎಂದು ಗುರುತಿಸಲಾಗಿದೆ. ಬಳಿಕ ಅದೆ ಗ್ರಾಮದ ಮತ್ತೊಬ್ಬರ ಮನೆಯ ಕಿಟಕಿ ಹಾಗೂ ಬಾಗಿಲು ಕೆಲಸ ಮಾಡಿದ್ದ, ಹೀಗಾಗಿ ಆ ಮನೆಯ 7 ಜನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಆಗಿದ್ದಾರೆ.

ಮೇ.5 ರಂದು, ಸೋಮಜಾಳ ಗ್ರಾಮದಲ್ಲಿ ಒಬ್ಬರ ಮನೆಯ ಬಾಗಿಲು ಕೆಲಸ ಮಾಡಿದ್ದಾನೆ. ಹೀಗಾಗಿ ಈತನ ಪ್ರಾಥಮಿಕ ಸಂಪರ್ಕಕ್ಕೆ ಓರ್ವ ಬಂದಿದ್ದಾನೆ. ಹೀಗೆ ಇವನ ಸಂಪರ್ಕಕ್ಕೆ ಬಂದ 12 ಜನರನ್ನ ಮುಂಜಾಗ್ರತ ಕ್ರಮವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss