ವಿಜಯಪುರ: ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮತ್ತೆ ಮುಂದುವರೆದಿದ್ದು, 22 ಪೊಲೀಸ್ ಸಿಬ್ಬಂದಿ, 7 ಕೈದಿಗಳಿಗೆ ಸೇರಿದಂತೆ ಗುರುವಾರ 144 ಮಂದಿಗೆ ಸೋಂಕು ದೃಢಪಟ್ಟಿದ್ದು, ಸಾವಿರ ಗಡಿ ದಾಟುವ ಮೂಕಲ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.
ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗುತ್ತ ಸಾಗಿದ್ದು, ಈವರೆಗೆ ಕೊರೋನಾ ಸೋಂಕಿಗೆ 19 ಮಂದಿ ಬಲಿಯಾದರೆ, ಸೋಂಕಿತರ ಸಂಖ್ಯೆ 1120 ಕ್ಕೆ ಏರಿಕೆಯಾಗಿದೆ.
ಇಲ್ಲಿನ ಗಾಂಧಿ ಚೌಕ್, ಗ್ರಾಮೀಣ ಪೊಲೀಸ್ ಠಾಣೆಯ 22 ಸಿಬ್ಬಂದಿ, 7 ಕೈದಿಗಳು, 10 ಆರೋಗ್ಯ ಸಿಬ್ಬಂದಿ, 6 ಮಹಾನಗರ ಪಾಲಿಕೆ ಸಿಬ್ಬಂದಿ, 2 ಎಸ್ಬಿಐ ಹಾಗೂ ಪ್ರವಾಸ ಹಿನ್ನೆಲೆ 5 ಜನರು ಸೇರಿದಂತೆ ಒಟ್ಟು 144 ಮಂದಿಗೆ ಸೋಂಕು ದೃಢಪಟ್ಟಿದೆ.
ಗುರುವಾರ ಮತ್ತೆ 65 ರೋಗಿಗಳು ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಒಟ್ಟು 719 ಮಂದಿ ಗುಣಮುಖರಾಗಿದ್ದಾರೆ. ಇನ್ನೂ 382 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.