ವಿಜಯಪುರ: ಜಿಲ್ಲೆಯ ಚಡಚಣ ಠಾಣೆಯಿಂದ SP ಕಚೇರಿಗೆ ವರ್ಗಾವಣೆಗೊಂಡಿದ್ದ PSI ಮಹಾದೇವ ಯಲಿಗಾರನನ್ನು ಅಮಾನತ್ತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ಆದೇಶ ಹೊರಡಿಸಿದ್ದಾರೆ.
ಈಚೆಗೆ ಮಹಾದೇವ ಯಲಿಗಾರ ಚಡಚಣ ಠಾಣೆ PSI ಆಗಿದ್ದ ವಳೇ, ಕೊರೋನಾ ವಿಷಮ ಪರಿಸ್ಥಿತಿಯಲ್ಲಿ ಲಾಕ್ಡೌನ್ ಉಲ್ಲಂಘಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು, ಸನ್ಮಾನ ಮಾಡಿಸಿಕೊಂಡು ಆರೋಪದ ಹಿನ್ನೆಲೆ ಚಡಚಣ ಪೊಲೀಸ್ ಠಾಣೆಯಿಂದ ನಗರ SP ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ವರ್ಗಾವಣೆ ಆದ ಬಳಿಕವೂ ಮಹಾದೇವ ಯಲಿಗಾರ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆ ಈತನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.