Sunday, April 11, 2021

Latest Posts

ವಿಜಯ್ ಹಜಾರೆ ಟ್ರೋಫಿ: ದ್ವಿತೀಯ ಅತಿವೇಗದ ಶತಕ ಬಾರಿಸಿದ ಅಭಿಷೇಕ್ ಶರ್ಮಾ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪಂಜಾಬಿನ ಅಭಿಷೇಕ್ ಶರ್ಮಾ ದೇಶೀ ಕ್ರಿಕೆಟಿನಲ್ಲಿ ದ್ವಿತೀಯ ಅತಿವೇಗದ ಶತಕ ಬಾರಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಅಭಿಷೇಕ್ ಅವರು 42 ಎಸೆತಗಳಲ್ಲೆ ಶತಕ ಪೂರೈಸಿದರು. ಅತ್ಯಂತ ವೇಗದ ಶತಕದ ದಾಖಲೆಯು ಯೂಸುಫ್ ಪಠಾಣ್ ಅವರ ಹೆಸರಲ್ಲಿದ್ದು ಅವರು 2009ರಲ್ಲಿ 40 ಎಸೆತಗಳಲ್ಲಿ ಶತಕ ಬಾರಿಸಿದ್ದರು.
ಇದಕ್ಕೆ ಮುನ್ನ ದ್ವಿತೀಯ ಅತಿವೇಗದ ಶತಕ ಬಾರಿಸಿದ ದಾಖಲೆಯು ವಿರಾಟ್ ಕೊಹ್ಲಿ (52 ಎಸೆತ) ಹೆಸರಲ್ಲಿತ್ತಾದರೂ, ಕೆಲವು ದಿನಗಳ ಹಿಂದೆ ಸೂರ್ಯಕುಮಾರ್ (50 ಎಸೆತ) ಅದನ್ನು ಮುರಿದಿದ್ದರು. ಅದನ್ನೀಗ ಅಭಿಷೇಕ್ ಮುರಿದಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss