Wednesday, July 6, 2022

Latest Posts

ವಿಜ್ಞಾನಿಗಳ ಕೊಡುಗೆ ಕುರಿತು ಮುಂದಿನ ಪೀಳಿಗೆಯವರಿಗೆ ಕೃತಿಯ ಮೂಲಕ ತಿಳಿಸಬೇಕು: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು: ವಿಜ್ಞಾನ ಲೇಖಕ ಪ್ರೊ.ಎಸ್.ಎನ್.ಹೆಗಡೆ ಅವರ ‘ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕöÈತರು ಸಂಪುಟಗಳ’ ಮುಂದಿನ ಮುದ್ರಣವನ್ನು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಂಗದಿAದ ಪ್ರಕಟಿಸಲಾಗುವುದು ಎಂದು ಮೈಸೂರು ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಸೋಮವಾರ ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ವಿಜ್ಞಾನ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯ ಪ್ರಾಣಿಶಾಸ್ತç ವಿಭಾಗದ ವತಿಯಿಂದ ಆಯೋಜಿಸಿದ್ದ ಡಾ.ಎಂ.ಆರ್.ರಾಜಶೇಖರ್ ಶೆಟ್ಟಿ ಅವರ ೧೦೧ನೇ ಜನ್ಮ ದಿನಾಚರಣೆ ಮತ್ತು ಲೇಖಕ ಡಾ.ಎಸ್.ಎನ್.ಹೆಗಡೆ ಅವರ `’ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕöÈತರು ಸಂಪುಟ ೨” ವರ್ಚುವಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಡಾ.ಎಂ.ಆರ್.ರಾಜಶೇಖರ್ ಶೆಟ್ಟಿ ಅವರಿಗೆ ಈ ಕೃತಿಯನ್ನು ಅರ್ಪಣೆ ಮಾಡಿರುವುದು ವಿಶೇಷವಾಗಿದೆ. ಪ್ರೊ.ಎಸ್.ಎನ್.ಹೆಗಡೆ ಅವರು ಈಗಾಗಲೇ ಎರಡು ಸಂಪುಟಗಳ ಹೊರತಂದಿದ್ದು, ಒಟ್ಟು ೮ ಸಂಪುಟಗಳ ಪ್ರಕಟಿಸುವ ಕನಸು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ವಿವಿಯ ಪ್ರಸಾರಂಗದ ವತಿಯಿಂದ ಉಳಿದ ಸಂಪುಟಗಳ ಮುದ್ರಣಕ್ಕೆ ಒತ್ತು ನೀಡಲಾಗುವುದು.

ಈ ಕುರಿತು ಚರ್ಚಿಸಲಾಗುವುದು. ಶಿಕ್ಷಕನನ್ನು, ಮತ್ತೊಬ್ಬ ಶಿಕ್ಷಕ ಮಾತ್ರ ಸಿದ್ಧಪಡಿಸಬಲ್ಲ. ಮೈಸೂರು ವಿವಿ ನಿಮ್ಮ ಬರವಣಿಗೆ ಸಹಕಾರಿಯಾಗಿರುತ್ತದೆ ಎಂದರು. ೨೨೫ ವಿಜ್ಞಾನಿಗಳ ಜೀವನ ಚರಿತ್ರೆಯ ಬಗ್ಗೆ ಬರೆಯುವುದು ಸುಲಭದ ಕೆಲಸವಲ್ಲ. ಕಡಿಮೆ ಎಂದರೂ ಸುಮಾರು ೫ ಸಾವಿರಕ್ಕೂ ಹೆಚ್ಚು ಪುಟಗಳಾಗುತ್ತದೆ. ಇಷ್ಟು ಮಾಹಿತಿಯು ಕನ್ನಡದಲ್ಲಿ ದೊರಕುವಂತೆ ಮಾಡುವ ಎಸ್. ಎನ್. ಹೆಗಡೆ ಅವರ ಕಾರ್ಯ. ಮತ್ತಷ್ಟು ಉತ್ತಮ ಕೃತಿಗಳು ಹೊರಬರಲಿ ಎಂದು ಹಾರೈಸಿದರು.

ವಿಜ್ಞಾನಿಗಳ ಜೀವನ ಚರಿತ್ರೆ ನೋಡಿದರೆ ಅವರು ಪಟ್ಟ ಶ್ರಮ ಅಪಾರ. ಸಂಶೋಧನೆಗಾಗಿ ಅನೇಕರು ತಮ್ಮ ಜಿವನವನ್ನೆ ಮುಡಿಪಾಗಿಟ್ಟಿದ್ದಾರೆ ಎಂದು ಉದಾಹರಣೆ ಸಹಿತವಾಗಿ ವಿವರಿಸಿದರು. ವಿಜ್ಞಾನಿಗಳ ಕೊಡುಗೆ ಕುರಿತು ಮುಂದಿನ ಪೀಳಿಗೆಯವರಿಗೆ ಕೃತಿಯ ಮೂಲಕ ತಿಳಿಸುವ ನಿಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯ. ವಿಜ್ಞಾನಿಗಳು ಸದುದ್ದೇಶದಿಂದ ಮಾಡಿದ ಸಂಶೋಧನೆಗಳನ್ನು ಇಂದು ಅನೇಕರು ಕೆಡಕಿಗೆ ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss