ವಿಡಿಯೋ ಕಾನ್ಫರೆನ್ಸಿಂಗ್ App ‘ಜೂಮ್’ ಬಳಕೆ ನಿಷೇಧ: ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

0
406

ನವದೆಹಲಿ: ಖ್ಯಾತ ವಿಡಿಯೋ ಕಾನ್ಫರೆನ್ಸಿಂಗ್ App ‘ಜೂಮ್’ ಬಳಕೆ ನಿಷೇಧ ಕುರಿತಾಗಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಂಗೀಕಾರ ನೀಡಿದೆ.
ಚೀನಾ ದಲ್ಲಿ ಸರ್ವರ್ ಹೊಂದಿರುವ ಈ App ಎಂಡ್ ಟು ಎಂಡ್ ಎಂಸ್ಕ್ರಿಪ್ಷನ್ ಹೊಂದಿಲ್ಲ, ಇದು ಖಾಸಗಿ ವಿಷಯಗಳು ಇತರರಿಗೆ ಸೋರಿಕೆಯಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿ ಮಹಿಳೆಯೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ, ನ್ಯಾಯಮೂರ್ತಿ ಹೃಷಿಕೇಶ್ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದು, ಈ ಸಂಬಂಧ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿದೆ.

LEAVE A REPLY

Please enter your comment!
Please enter your name here