ವಿದೇಶಗಳಲ್ಲಿ ವಾಸವಾಗಿರುವ ಓವರಸೀಸ್ ಓವರ್‌ಸೀಸ್ ಭಾರತೀಯರಿಗೆ ತಾಯ್ನಾಡಿಗೆ ಮರಳಲು ಗ್ರೀನ್ ಸಿಗ್ನಲ್

0
147

ಹೊಸದಿಲ್ಲಿ: ವಿದೇಶಗಳಲ್ಲಿ ವಾಸವಾಗಿರುವ ಓವರಸೀಸ್ ಭಾರತೀಯರು ತಾಯ್ನಾಡಿಗೆ ಮರಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಕೇಂದ್ರ ಗೃಹ ಇಲಾಖೆ ಶುಕ್ರವಾರದಂದು ಅಧಿಕೃತ ಆದೇಶವೊಂದನ್ನು ಹೊರಡಿಸಿದೆ.
ಓಸಿಐ ಕಾರ್ಡ್ ಇರುವಂತವರು ಭಾರತಕ್ಕೆ ಅಡ್ಡಿ ಇಲ್ಲ. ಬಹಳ ವರ್ಷಗಳಿಂದಲೂ ವಿದೇಶದಲ್ಲಿ ವಾಸವಾಗಿರುವ ಭಾರತೀಯರು ಮತ್ತೆ ಇಲ್ಲಿಗೆ ಮರಳಬಹುದು. ಅಲ್ಲದೆ ಈ ರೀತಿ ನೆಲೆಸಿರುವ ತಂದೆ, ತಾಯಂದಿರು ಜನ್ಮತಃ ಭಾರತೀಯರಾಗಿದ್ದರೆ ಮತ್ತು ಅವರು ಅನಾರೋಗ್ಯವಂತರಾಗಿದ್ದರೆ ಭಾರತಕ್ಕೆ ವಾಪಸ್ ಆಗಲು ಅವಕಾಶವಿದೆ. ಮಾರ್ಚ್ ತಿಂಗಳಿನಲ್ಲಿ ಲಾಕ್‌ಡೌನ್ ಘೋಷಣೆಯಾದ ಮೇಲೆ ಕೇಂದ್ರ ಸರ್ಕಾರ ಓಸಿಐ ಕಾರ್ಡುದಾರರ ತಾಯ್ನಾಡಿನ ಪ್ರವೇಶಕ್ಕೆ ಕೆಲವೊಂದು ನಿಬಂಧನೆಗಳನ್ನು ಹೇರಿತ್ತು. ಆದರೆ ಅವುಗಳನ್ನು ಈಗ ಗೃಹ ಇಲಾಖೆ ಪರಿಷ್ಕರಿಸಿದೆ.

LEAVE A REPLY

Please enter your comment!
Please enter your name here