Wednesday, July 6, 2022

Latest Posts

ವಿದೇಶದಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಸಜ್ಜಾಗುತ್ತಿದೆ 58 ವಿಮಾನ!

ಹೊಸದಿಲ್ಲಿ: ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರನ್ನು ತಾಯ್ನಾಡಿಗೆ ಕರೆದುಕೊಂಡು ಬರುಲು ವಂದೇ ಭಾರತ್ ಮಿಷನ್ ಅಡಿಯಲ್ಲಿ ಮತ್ತೆ 58 ವಿಮಾನಗಳನ್ನು ನಿಯೋಜಿಸಲಾಗಿದೆ ಎಂದು ನಾಗರೀಕ ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಗಲ್ಫ್ ರಾಷ್ಟ್ರಗಳಿಂದ ಭಾರತೀಯರನ್ನು ಕರೆದುಕೊಂಡು ಬರಲು 107 ವಿಮಾನಗಳನ್ನು ನಿಯೋಜಿಸಲಾಗಿತ್ತು, ಆದರೆ 58 ವಿಮಾನಗಳ ಏರಿಕೆಯಿಂದ ಇದೀಗ 165 ವಿಮಾನಗಳು ಹಾರಾಟ ನಡೆಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಜೂನ್ 11ರಿಂದ 3ನೇ ಹಂತದ ವಂದೇ ಭಾರತ್ ಮಿಷನ್ ಪ್ರಾರಂಭವಾಗಲಿದ್ದು, ಗಲ್ಫ್ ರಾಷ್ಟ್ರಗಳಿಂದ 70 ಸಾವಿರ ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗುತ್ತದೆ ಎಂದು ತಿಳಿಸಿದ್ದರು.

ಯೂರೋಪ್ ರಾಷ್ಟ್ರಗಳಿಗೆ 80 ವಿಮಾನಗಳು ಇಂದಿನಿಂದ ಜೂನ್ 30ರವರೆಗೂ ಹಾರಾಟ ಮಾಡಲಿದೆ. ಇದರಲ್ಲಿ 70 ವಿಮಾನಗಳು ಈಗಾಗಲೇ ನಿಯೋಜಿಸಿದ್ದು, (ಪ್ರತಿ ದಿನ ಲಂಡನ್ ಗೆ 2 ವಿಮಾನ ಯೂರೋಪ್ ನ ನಿಗದಿತ ನಿಲ್ದಾಣಗಳಿಗೆ 2 ವಿಮಾನ) ಹಾರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss