ಹೊಸದಿಗಂತ ಆನ್ ಲೈನ್ ಡೆಸ್ಕ್:
ವಿಶ್ವದಲ್ಲಿ ಭಾರತದ ಹೆಸರನ್ನು ಹಾಳು ಮಾಡಲು ಜನರು ಎಂತಹ ಸ್ಥಿತಿಗೆ ಬೇಕಾದರೂ ಇಳಿಯುತ್ತಿದ್ದಾರೆ. ಅಂದರೆ ಭಾರತ ಮಾತ್ರವಲ್ಲದೆ ಭಾರತದ ಚಹಾದ ಹೆಸರನ್ನೂ ಕೆಡಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಸ್ಸಾಂ ನ ಸೋನಿತ್ಪುರದ ದೆಜುಯಜುಲಿಯಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ ಭಾರತದ ಚಹಾದ ಹೆಸರನ್ನು ಕೆಡಿಸುವ ಕೃತ್ಯಗಳು ನಡೆಯುತ್ತಿದ್ದು, ಇದರ ಬಗ್ಗೆ ನಾವು ಅನೇಕ ಸುದ್ದಿಗಳನ್ನು ಓದುತ್ತಿದ್ದೇವೆ. ಭಾರತದ ಚಹಾ ಹೆಸರನ್ನು ಕೆಡಿಸಲು ವಿದೇಶದಲ್ಲೂ ಪಿತೂರಿ ನಡೆಯುತ್ತಿದೆ. ಇಂತಹವರನ್ನು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಕೇಳಿದರು.
ದೇಶದಲ್ಲಿ ಅಭಿವೃದ್ಧಿಯತ್ತ ಮುಖಮಾಡಿರುವ ರಾಷ್ಟ್ರಗಳಲ್ಲಿ ಅಸ್ಸಾಂ ಕೂಡ ಒಂದಾಗಿದ್ದು, ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 6 ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗಿದೆ. ಪ್ರತಿ ರಾಜ್ಯದಲ್ಲಿಯೂ ಮಾತೃ ಭಾಷೆಯಲ್ಲಿ ವೈದ್ಯಕೀಯ ಮತ್ತು ತಂತ್ರಜ್ಞಾನ ಕಲಿಸುವ ಕಾಲೇಜು ನಿರ್ಮಾಣವಾಗಬೇಕು ಎಂದರು.
#WATCH | People who are conspiring to defame India have stooped so low that they're not sparing even Indian tea… Some documents have come up revealing that some foreign powers are planning to attack India's identity associated with tea. Will you accept this attack?: PM in Assam pic.twitter.com/6BCOBIn1ET
— ANI (@ANI) February 7, 2021