Sunday, August 14, 2022

Latest Posts

ವಿದೇಶಿ ದೇಣಿಗೆ ಪಡೆಯಲು ಎನ್ ಜಿಒಗಳಿಗೆ ಇನ್ಮುಂದೆ ಆಧಾರ್ ಕಡ್ಡಾಯ: ‘FCRAʼ ಕಾಯ್ದೆ ತಿದ್ದುಪಡಿಗೆ ಲೋಕಸಭೆಯಲ್ಲಿ ಅಂಗೀಕಾರ!

ಹೊಸದಿಲ್ಲಿ : ವಿದೇಶಿ ದೇಣಿಗೆ ಪಡೆಯಲು ಬಯಸುವ ಎನ್ ಜಿಒಗಳಿಗೆ ಆಧಾರ್ ಕಡ್ಡಾಯಗೊಳಿಸಲು ಲೋಕಸಭೆ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ 2010ಕ್ಕೆ ತಿದ್ದುಪಡಿಗಳನ್ನು ಸೋಮವಾರ ಅಂಗೀಕರಿಸಿದೆ.
2010 ರಿಂದ 2019 ರ ಅವಧಿಯಲ್ಲಿ ವಿದೇಶದಿಂದ ಹರಿದುಬಂದ ಕೊಡುಗೆ ದ್ವಿಗುಣಗೊಂಡಿದೆ. ಆದರೆ, ಅದು ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗಿಲ್ಲ. ಸರಿಯಾದ ಹಣಕಾಸು ಲೆಕ್ಕಾಚಾರ ಒಪ್ಪಿಸದ ಸರ್ಕಾರೇತರ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳ ವಿರುದ್ಧ ಕ್ರಿಮಿನಲ್ ತನಿಖೆಯೂ ನಡೆಯಲಿದ್ದು, 19 ಸಾವಿರ ಸಂಸ್ಥೆಗಳ ನೋಂದಣಿ ಪ್ರಮಾಣಪತ್ರ ರದ್ದುಪಡಿಸಲಾಗುವುದು ಎನ್ನಲಾಗಿದೆ.
ಕೇಂದ್ರ ಸರ್ಕಾರ ಸಂಸತ್ತಿನ ಕೆಳಮನೆಯಲ್ಲಿ ಮಂಡಿಸಿದ ಮಸೂದೆಯ ಮೂಲಕ ಎಫ್ ಸಿಆರ್ ತಿದ್ದುಪಡಿಗಳನ್ನ ಪ್ರಸ್ತಾಪಿಸಿತು. ಅದರಂತೆ ಸದ್ಯ ಪ್ರಸ್ತಾವಿತ ತಿದ್ದುಪಡಿಗಳಿಗೆ ಕೇಂದ್ರ ಒಪ್ಪಿಗೆ ನೀಡಿದ್ದು, ‘ಅನುಸರಣೆ ವ್ಯವಸ್ಥೆಯನ್ನ ಬಲಪಡಿಸುವ ಮೂಲಕ, ವಿದೇಶಿ ವಂತಿಗೆಯನ್ನ ಸ್ವೀಕರಿಸುವಲ್ಲಿ ಮತ್ತು ಬಳಕೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಮೂಲಕ ಎಫ್‌ಸಿಆರ್‌ಎ ನಿಬಂಧನೆಗಳನ್ನು ಕ್ರಮಬದ್ಧಗೊಳಿಸಲು ಪ್ರಯತ್ನಿಸುತ್ತದೆ’ ಎಂದು ಸರ್ಕಾರ ಹೇಳಿದೆ.
ಈ ತಿದ್ದುಪಡಿಗಳ ಅನ್ವಯ ವಿದೇಶಿ ದೇಣಿಗೆ ಬಯಸುವ ಎನ್ ಜಿಒಗಳು ಮತ್ತು ಇತರ ಸಂಸ್ಥೆಗಳ ಎಲ್ಲ ಪದಾಧಿಕಾರಿಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ. ಎಫ್ ಸಿಆರ್ ಎ ಅಡಿಯಲ್ಲಿ ಪಡೆಯಲಾದ ವಿದೇಶಿ ನಿಧಿಗಳ ಬಳಕೆಯನ್ನು ಪ್ರಸಕ್ತ ಮಿತಿಯಲ್ಲಿ ಶೇ.50ರಿಂದ ಶೇ.20ಕ್ಕೆ ಮಿತಿಗೊಳಿಸಲು ಮಸೂದೆಯಲ್ಲಿ ಆಗ್ರಹಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss