ವಾಷಿಂಗ್ಟನ್: ಉದ್ಯೋಗ ಮತ್ತು ಉನ್ನತ ಶಿಕ್ಷಣದ ನಿರೀಕ್ಷೆಯಲ್ಲಿರುವ ವಿದೇಶಿಯರಿಗೆ ಅಮೆರಿಕ ಶಾಕ್ ನೀಡಿದೆ. ಇನ್ನು ಮುಂದೆ ಹೊಸದಾಗಿ ಎಚ್ 1ಬಿ ಹಾಗೂ ಎಚ್2ಬಿ ವೀಸಾಗಳನ್ನು ನೀಡುವುದಿಲ್ಲವೆಂದು ಟ್ರಂಪ್ ಆಡಳಿತ ತಾತ್ವಿಕ ತೀರ್ಮಾನ ಕೈಗೊಂಡಿದ್ದು, ಇದು ಲಕ್ಷಾಂತರ ಮಂದಿ ಉದ್ಯೋಗಾಕಾಂಕ್ಷಿಗಳ ಆಸೆಗೆ ತಣ್ನೀರು ಎರಚಿದಂತಾಗಿದೆ.
ಕೊರೋನಾ ಮಹಾಮಾರಿಯಿಂದ ಅಮೆರಿಕದಲ್ಲೀಗ ಶೇ 27ಕ್ಕೂ ಅಧಿಕ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರಿದ್ದು ಈ ಕೂಡಲೇ ವಿದೇಶಿಯರಿಗೆ ನೀಡುವ ಈ ವೀಸಾಗಳನ್ನು ನಿಲ್ಲಿಸಲು ಸೆನೆಟ್ ಸದಸ್ಯರು ಸರ್ಕರದ ಮೇಲೆ ತೀವ್ರ ಒತ್ತಡವನ್ನು ಹೇರಿದ್ದಾರೆ. ಈ ದಿಶೆಯಲ್ಲಿ ಶ್ವೇತಭವನದಿಂದ ಯಾವುದೇ ಕ್ಷಣದಲ್ಲಿ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ. ಭಾರತ ಸೇರಿದಂತೆ ವಿವಿಧ ದೇಶಗಳ ಲಕ್ಷಾಂತರ ಮಂದಿ ಯವಕ, ಯುವತಿಯರು ಎಚ್1ಬಿ, ಎಚ್2ಬಿ ವೀಸಾಗಳಿಗಾಗಿ ಅರ್ಜಿ ಸಲ್ಲಿಸಿರುತ್ತಾರೆ.