Wednesday, June 29, 2022

Latest Posts

ವಿದ್ಯಾಕಾಶಿಯಲ್ಲಿ ಕೊರೋನಾ ಅಟ್ಟಹಾಸ: ಗುರುವಾರ 47 ಜನರಲ್ಲಿ ಪಾಸಿಟಿವ್ ದೃಢ, ಸೋಂಕಿತರ ಸಂಖ್ಯೆ 427 ಏರಿಕೆ

ಧಾರವಾಡ: ಸಾಹಿತಿಗಳ ತವರೂರಾದ ಧಾರವಾಡ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ನಿತ್ಯವೂ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಗುರುವಾರವೂ 47 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆಯಾಗಿದೆ.
ಗುರುವಾರ ಬಿಡುಗಡೆಗೊಂಡ ಆರೋಗ್ಯ ಇಲಾಖೆ ವರದಿಯಲ್ಲಿ ಮೂರು ವರ್ಷದ ಹೆಣ್ಣು ಮಗು ಸೇರಿದಂತೆ 10 ವರ್ಷದ ಇಬ್ಬರು ಬಾಲಕಿಯರಲ್ಲಿ ಸೋಂಕು ದೃಢಪಟ್ಟಿದೆ. ಅಲ್ಲದೇ, 16 ಯುವಕ-ಯುವತಿಯರಲ್ಲಿ ಹಾಗೂ ಏಳು ಜನ ವೃದ್ಧರಲ್ಲಿ ಈ ಮಹಾಮಾರಿ ವಕ್ಕರಿಸಿದೆ.
ಸುಮಾರು 21 ಜನ ಮಧ್ಯ ವಯಸ್ಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈವರೆಗೂ 180 ಜನ ಬಿಡುಗಡೆಹೊಂದಿದ್ದು, 239 ಸಕ್ರಿಯ ಪ್ರಕರಣಗಳಿವೆ. ಇವರಿಗೆ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ ಈ ಮಹಾಮಾರಿಗೆ ಎಂಟು ಜನರ ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss