Thursday, August 11, 2022

Latest Posts

ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ 184 ಜನ ಸೋಂಕಿತರು ಪತ್ತೆ

ಧಾರವಾಡ: ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿoದ ಮೃತರ ಸಂಖ್ಯೆ ನಿತ್ಯವೂ ಹೆಚ್ಚುತ್ತಿದೆ. ಶನಿವಾರವೂ 8 ಜನ ಮೃತಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 139ಕ್ಕೆ ಏರಿಕೆ ಕಂಡಿದೆ.
ಹುಬ್ಬಳ್ಳಿ ದಾಜಿಬಾನಪೇಟೆಯ 74 ವರ್ಷದ (ಪಿ-76754) ವ್ಯಕ್ತಿ, ನವಲಗುಂದ ತಾಲೂಕಿನ ಅಣ್ಣಿಗೇರಿಯ 34 ವರ್ಷದ (ಪಿ-102168) ವ್ಯಕ್ತಿ, ಹುಬ್ಬಳ್ಳಿ ಜೆಪಿ ನಗರದ 53 ವರ್ಷದ (ಪಿ-103008೮) ವ್ಯಕ್ತಿ, ಹುಬ್ಬಳ್ಳಿ ವಿಜಯ ನಗರದ 72 ವರ್ಷದ(ಪಿ-95123) ವ್ಯಕ್ತಿ ಮೃತಪಟ್ಟಿದ್ದಾರೆ.
ಹುಬ್ಬಳ್ಳಿ ಹೊಸೂರಿನ 72 ವರ್ಷದ(ಪಿ-102213) ವ್ಯಕ್ತಿ, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರ ಗ್ರಾಮದ 55 ವರ್ಷದ (ಪಿ-106577) ವ್ಯಕ್ತಿ, ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ 73 ವರ್ಷದ(ಪಿ-68689) ವ್ಯಕ್ತಿ ಹಾಗೂ ಧಾರವಾಡ ಹೊನ್ನಾಪೂರದ 56 ವರ್ಷದ (ಪಿ-106986) ವ್ಯಕ್ತಿ ಬಲಿಯಾಗಿದ್ದಾರೆ.
ಮೃತರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ ,ಎದೆ ನೋವು ಇತರ ಲಕ್ಷಣಗಳನ್ನು ಹೊಂದಿದ್ದರು. ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.
ಹೊಸದಾಗಿ 184 ಜನರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,275 ಏರಿದೆ. 50 ಜನ ಸೋಂಕಿoದ ಗುಣವಾಗಿದ್ದು, ಈವರೆಗೆ 1,779 ಜನ ಕಾಯಿಲೆ ಮುಕ್ತರಾಗಿದ್ದಾರೆ. ಜಿಲ್ಲೆಯ 2,357 ಸಕ್ರಿಯ ಪ್ರಕರಣಗಳಿಗೆ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss