Friday, July 1, 2022

Latest Posts

ವಿದ್ಯಾನಗರಿ ಬೆಚ್ಚಿಬೀಳಿಸಿದ ತಬ್ಲಿಘಿ ನಂಟು: 9 ಜನರಲ್ಲಿ ಕೊರೋನಾ ಪಾಸಿಟಿವ್

ಧಾರವಾಡ: ಕೋವಿಡ್-19ಗೆ ಕುರಿತಂತೆ ಹಲವು ದಿನಗಳಿಂದ ಕೆಂಪು ವಲಯದಿಂದ ಕಿತ್ತಳೆ ವಲಯದತ್ತ ಸಾಗಿದ್ದ ವಿದ್ಯಾನಗರಿ ಸಾರ್ವಜನಿಕರಿಗೆ ಮಂಗಳವಾರ ಬಿಡಗಡೆಯಾದ ಆರೋಗ್ಯ ಇಲಾಖೆ ವರದಿ ಜಿಲ್ಲೆ ಜನರಿಗೆ ಬೀಗ್ ಶಾಕ್ ನೀಡಿದೆ.

ಹೌದು, ಮಂಗಳವಾರ ಬಿಡುಗಡೆಗೊಂಡ ಆರೋಗ್ಯ ಇಲಾಖೆ ವರದಿಲ್ಲಿಯಲ್ಲಿ‌ ಬರೋಬ್ಬರಿ ಒಂಭತ್ತು ಜನರಲ್ಲಿ ಕೊರೋನಾ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಇದು ಜಿಲ್ಲೆಯ ಜನರ ನೆಮ್ಮದಿ ಕೆಡಿಸಿದೆ.

ಗುಜರಾತಿನ ಅಹಮ್ಮದಾಬಾದ್ ನಗರದಿಂದ ಜಿಲ್ಲೆಗೆ ಬಂದಿರುವ 9 ಜನರಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಅವರನ್ನು ಪಿ.879(55), ಪಿ.880(31), ಪಿ.881(25), ಪಿ.882(70), ಪಿ.883(26), ಪಿ.884(18), ಪಿ.885(19), ಪಿ.886(20), ಪಿ.887 (27) ಎಂದು ಗುರುತಿಸಿದೆ.

ಗುಜರಾತಿನಿಂದ ಆಗಮಿಸಿದ ಈ ಎಲ್ಲ ವ್ಯಕ್ತಿಗಳನ್ನು ಜಿಲ್ಲೆಯ ಆಗಮನ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡು ಪ್ರತ್ಯೇಕಿ ಇರಿಸಿತ್ತು. ಬಂದಾಕ್ಷಣ ಮೂಗು-ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು. ಈಗ ಸೋಂಕು ದೃಢಪಟ್ಟಿರುವದರಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಎಲ್ಲ ಒಂಬತ್ತು ಜನ ಪುರುಷರಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವದರಿಂದ ಜಿಲ್ಲೆಯಲ್ಲಿ ಈವರೆಗೆ ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, ಈಗಾಗಲೇ 7 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss