Tuesday, September 22, 2020
Tuesday, September 22, 2020

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ವಿದ್ಯಾರ್ಥಿಗಳನ್ನು ಕಾಡುತ್ತಿದೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆ: ಗುಡ್ಡ ಹತ್ತೋದ ಬೇಕು, ಗುಡ್ಡ ಇಳಿದೋಗಬೇಕು!

sharing is caring...!

ಹರೀಶ ಕುಲ್ಕುಂದ

ಮಂಗಳೂರು: ಗುಡ್ಡದ ಮೇಲೆ ನಿರ್ಮಿಸಿದ ಪುಟ್ಟ ‘ಗುಡಿಸಲು’… ಮೇಲೆ ಕಬ್ಬಿಣದ ಶೀಟ್, ಪ್ಲಾಸ್ಟಿಕ್ ಹೊದಿಕೆಯ ಸೂರು… ಸೊಳ್ಳೆ ಕಾಟ ತಡೆಯಲು ಅಡಿಕೆ ಸಿಪ್ಪೆಯ ಹೊಗೆ… ನೆಟ್‌ವರ್ಕ್ ಬಂದೊಡನೆ ಮೊಬೈಲ್ ಮೂಲಕ ಕಲಿಕೆ ಶುರು…
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶ ಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಆನ್‌ಲೈನ್ ಶಿಕ್ಷಣದ ಚಿತ್ರಣವಿದು.
ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಎಂಬುದು ಅತಿಥಿಯಂತೆ. ವಿದ್ಯುತ್ ಕೈ ಕೊಟ್ಟಾಗ ಮಾಯವಾಗುವ ನೆಟ್‌ವರ್ಕ್ ದುರವಸ್ಥೆಗೆ ವಿದ್ಯಾರ್ಥಿಗಳು ಕೈಗೊಂಡ ಪರ್ಯಾಯ ವ್ಯವಸ್ಥೆಯೇ ಗುಡ್ಡದ ಮೇಲೆ ಗುಡಿಸಲು.
ಗುಡ್ಡದಲ್ಲಿ ಮಾತ್ರ ಸಿಗುವ ನೆಟ್‌ವರ್ಕ್!
ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುವುದೇ ಅಪರೂಪ ಎಂಬ ಪರಿಸ್ಥಿತಿಯಲ್ಲಿ ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಆನ್‌ಲೈನ್ ಕಲಿಕೆಗೆ ಗುಡ್ಡಕ್ಕೆ ತೆರಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಕೊಂಬಾರು ಗ್ರಾಮದ ಕಾಪಾರು, ಬಗ್ಪುಣಿ ಪರಿಸರದ ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗ ಗುಡ್ಡದ ಮೇಲೆ ಗುಡಿಸಲು ಹಾಕಿಕೊಂಡು ಆನ್‌ಲೈನ್ ಪಾಠಕ್ಕೆ ಹಾಜರಾಗುತ್ತಿದ್ದಾರೆ.
ಟವರ್ ಸಂಪರ್ಕ ಸಾಧಿಸಿ ಆನ್‌ಲೈನ್ ಕಲಿಕೆ ಇಲ್ಲಿನ ಗುಡ್ಡಗಳಲ್ಲಿ ದೂರದ ಟವರ್‌ಗಳಿಂದಲೂ ನೆಟ್‌ವರ್ಕ್ ಲಭ್ಯವಾಗುವ ಕಾರಣ ಒಂದಿಲ್ಲೊಂದು ಟವರ್‌ನ ಸಂಪರ್ಕ ಸಾಧಿಸಿ ಆನ್‌ಲೈನ್ ಕಲಿಕೆ ನಡೆಸುತ್ತಿದ್ದಾರೆ.
ಗುಡ್ಡದಲ್ಲಿ ಕಬ್ಬಿಣದ ಶೀಟ್, ಪ್ಲಾಸ್ಟಿಕ್ ಗೋಡೆ
ಕಾಪಾರು ನಿವಾಸಿ ವಿದ್ಯಾರ್ಥಿನಿಯರಾದ ಶಿಲ್ಪ ಕೆ.ಎಸ್., ಪುನೀತ ಕೆ.ಎಸ್. ಸಹೋದರಿಯರು ಮನೆಯ ಪಕ್ಕದ ಗುಡ್ಡದಲ್ಲಿ ಕಬ್ಬಿಣದ ಶೀಟ್, ಪ್ಲಾಸ್ಟಿಕ್ ಗೋಡೆಯ ಸೂರಿನಡಿಯಲ್ಲಿ ಆನ್‌ಲೈನ್ ಪಾಠ ಕೇಳುತ್ತಿದ್ದಾರೆ. ಗುಡ್ಡದಲ್ಲಿ ಸೊಳ್ಳೆ ಕಾಟ ತಡೆಯಲು ಅಡಿಕೆ ಸಿಪ್ಪೆಗೆ ಬೆಂಕಿ ಹಾಕಿ ಹೊಗೆಯಾಡಿಸುವ ಉಪಾಯದ ಮೊರೆ ಹೋಗಿದ್ದಾರೆ. ಶಿಲ್ಪ ಬೆಳ್ಳಾರೆ ಪೆರುವಾಜೆಯ ಡಾ.ಕೆ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿನಿ. ಪುನೀತ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ಯಾರಾಮೆಡಿಕಲ್ ಕಲಿಯುತ್ತಿದ್ದಾರೆ. ಇಬ್ಬರೂ ಸೋಮವಾರದಿಂದ ಶನಿವಾರದವರೆಗೆ ನಿಗದಿತ ಸಮಯದವರೆಗೆ ಗುಡ್ಡಕ್ಕೆ ತೆರಳಿ ಗುಡಿಸಲಿನಲ್ಲಿ ಕುಳಿತು ಆನ್‌ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ.
ಮನೆಯೊಳಗೆ ಬಿಡಿ, ಅಂಗಳದಲ್ಲೂ ಇಲ್ಲ
ಕೊರೋನಾ ಲಾಕ್‌ಡೌನ್ ಬಳಿಕ ಕೆಲ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಕಲಿಕೆ ಮೊರೆಹೋಗಿವೆ. ನಗರದಲ್ಲಿ ಎಲ್ಲ ಕಂಪೆನಿಗಳ ನೆಟ್‌ವರ್ಕ್ ಸಲಭದಲ್ಲಿ ಸಿಗುತ್ತದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಮನೆಯೊಳಗೆ ಬಿಡಿ, ಅಂಗಳದಲ್ಲೂ ನೆಟ್‌ವರ್ಕ್ ಸಿಗದಿದ್ದಾಗ ವಿದ್ಯಾರ್ಥಿಗಳು ಗುಡ್ಡದ ತುದಿಗೆ ತೆರಳುವುದೊಂದೆ ಮಾರ್ಗವಾಗಿದೆ.
ವಿದ್ಯುತ್ ಕೈಕೊಟ್ಟಾಗ ನೆಟ್ ಆಫ್
ವಿದ್ಯುತ್ ಕೈಕೊಟ್ಟಾಗ ಬಿಎಸ್‌ಎನ್‌ಎಲ್ ಮೊಬೈಲ್ ನೆಟ್ ಕೂಡಾ ಬಂದ್ ಆಗುತ್ತದೆ. ಕೆಲವೆಡೆ ಡಿಸೆಲ್ ಪಂಪ್ ಮೂಲಕ ಟವರ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮೊಬೈಲ್ ನೆಟ್‌ವರ್ಕ್ ಒದಗಿಸಲಾಗುತ್ತದೆ. ಇನ್ನೂ ಕೆಲವೆಡೆ ಈ ವ್ಯವಸ್ಥೆಯೂ ಇಲ್ಲದಾಗಿದೆ.

ಬೆಳಗ್ಗೆ ಮತ್ತು ಸಂಜೆ ವೇಳೆ ಆನ್‌ಲೈನ್ ತರಗತಿ ನಡೆಯುತ್ತಿದೆ. ಬೇಸಗೆಯಲ್ಲಿ ಮರದಡಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದೆವು. ಮಳೆಗಾಲ ಆರಂಭವಾದ ಬಳಿಕ ಗುಡಿಸಲು ನಿರ್ಮಿಸುವುದು ಅನಿವಾರ್ಯವಾಯಿತು. ಜತೆಗೆ ಸೊಳ್ಳೆ ಕಾಟವೂ ಶುರುವಾಗಿದೆ. ಆದರೂ, ಪಾಠ ಮಿಸ್ ಮಾಡುವಂತಿಲ್ಲ ಎಂಬ ಕಾರಣಕ್ಕೆ ಕಷ್ಟವಾದರೂ ಆನ್‌ಲೈನ್ ತರಗತಿ ವೀಕ್ಷಿಸುತ್ತಿದ್ದೇವೆ.
ಶಿಲ್ಪ ಕೆ.ಎಸ್. ಬಿಕಾಂ ವಿದ್ಯಾರ್ಥಿನಿ

ಕಳೆದ ಎರಡು ತಿಂಗಳಿನಿಂದ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಆನ್‌ಲೈನ್ ತರಗತಿ ನಡೆಯುತ್ತಿದೆ. ನಮ್ಮ ಮನೆಯಲ್ಲಿ ಮೊಬೈಲ್ ನೆಟ್ ಸಮರ್ಪಕವಾಗಿ ಸಿಗುತ್ತಿಲ್ಲ. ಅದಕ್ಕಾಗಿ ಮನೆ ಪಕ್ಕದ ಗುಡ್ಡದ ತುದಿಗೆ ತೆರಳಿ ಪಾಠ ಕೇಳುತ್ತಿದ್ದೇನೆ. ಬೇಸಗೆಯಲ್ಲಿ ವಿದ್ಯುತ್ ಸಮಸ್ಯೆ ಅಷ್ಟಾಗಿ ಇರಲಿಲ್ಲ. ಮಳೆಗಾಲ ಆರಂಭವಾದ ಬಳಿಕ ಆಗಾಗ್ಗೆ ವಿದ್ಯುತ್ ಕಡಿತಗೊಂಡಾಗ ಮೊಬೈಲ್ ನೆಟ್‌ವರ್ಕ್ ಕೂಡಾ ಬಂದ್ ಆಗುತ್ತಿದೆ.
ಪುನೀತ ಕೆ.ಎಸ್. ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕಾಸರಗೋಡು ಜಿಲ್ಲೆಯಲ್ಲಿ ಅನ್ ಲಾಕ್-4 ಜಾರಿಗೆ: ಸಹಜ ಸ್ಥಿತಿಯತ್ತ ಜನಜೀವನ

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆಯ ಆತಂಕ ನೆಲೆಗೊಂಡಿರುವಂತೆಯೇ ಇನ್ನಷ್ಟು ಸಡಿಲಿಕೆ ಜಾರಿಗೆ ಬರುವುದರೊಂದಿಗೆ ಜನಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ. ದೇಶದಲ್ಲಿ ಅನ್ ಲಾಕ್-4 ಸಡಿಲಿಕೆ ಸೋಮವಾರದಿಂದ ಜಾರಿಗೆ ಬಂದಿದೆ. ಅದರಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 100...

Don't Miss

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...
error: Content is protected !!