ಹಾವೇರಿ: ಜಿಲ್ಲೆಯ ಹಿರೇಕೆರೂರ ಪಟ್ಟಣದ ಸಂಗಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡುವದಕ್ಕೆ ಪ್ರಯತ್ನಿಸುತ್ತಿದ್ದ ನಾಲ್ಕು ಜನ ಶಿಕ್ಷಕರ ವಿರುದ್ಧ ಎಂಪಿಸಿ ಪ್ರಕರಣ ದಾಖಲು ಮಾಡಲಾಗಿದೆ.
ಗುರುವಾರ ಪಟ್ಟಣದಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಇಂಗ್ಲಿಷ್ ಪರೀಕ್ಷಾ ಕೇಂದ್ರಕ್ಕೆ ತಹಶೀಲ್ದಾರ ಆರ್.ಎಚ್.ಭಾಗವಾನ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಈ ನಾಲ್ವರು ಶಿಕ್ಷಕರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ತಹಶೀಲ್ದಾರರು ಅವರನ್ನು ವಿಚಾರಿಸಿದಾಗ ಅವರು ಅನುಮಾನ ಬರುವ ಉತ್ತರವನ್ನು ನೀಡಿದ್ದಾರೆ.
ಈ ಸಂದರ್ಭ ತಹಶೀಲ್ದಾರಿಗೆ ಸಂಪೂರ್ಣ ಅನುಮಾನ ಬಂದು ಅವರನ್ನು ತಪಾಸಣೆ ಮಾಡಿದಾಗ ಅವರ ಬಳಿ ಕೆಲ ಇಂಗ್ಲಿಷ್ ಭಾಷೆಯ ಚೀಟಿಗಳು ಕಂಡು ಬಂದ ಹಿನ್ನಲೆಯಲ್ಲಿ ಅವರ ವಿರುದ್ಧ ಹಿರೇಕರೂರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎಂಪಿಸಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯಸ್ಥ ಸುಂಕಾಪುರ ಅವರ ಮೇಲೂ ಕೂಡ ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ
ಪ್ರಕರಣ ದಾಖಲಿಸಲಾಗಿದೆ.