ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ನಾಳೆ ನಡೆಯಲಿರುವ ಭಾರತ್ ಬಂದ್”ಗೆ ರಾಜ್ಯ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟವೂ ಬೆಂಬಲ ನೀಡಲಿದ್ದು, ವಿದ್ಯಾರ್ಥಿಗಳಿಗೆ ನಾಳೆ ಆನ್ ಲೈನ್ ಕ್ಲಾಸ್’ಗಳನ್ನೂ ಬಂದ್ ಮಾಡಿದೆ.
ರೈತ ಸಂಘಟನೆಗಳ ‘ಭಾರತ್ ಬಂದ್’ ಕರೆಗೆ ನಾವು ಕೂಡ ಬೆಂಬಲ ನೀಡಲಿದ್ದೇವೆ. ಈ ನಿಮಿತ್ತ ಮಂಗಳವಾರ ಒಂದು ದಿನ ಆನ್ ಲೈನ್ ತರಗತಿಗಳನ್ನು ನಡೆಸುವುದಿಲ್ಲ. ಆದರೆ ಆನ್ ಲೈನ್ ಪರೀಕ್ಷೆಗಳು ನಿಗದಿಯಾಗಿದ್ದರೆ ಅವುಗಳು ಮಾತ್ರ ನಡೆಯಲಿದೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳಿದ್ದಾರೆ.
ಭಾರತ್ ಬಂದ್ ಗೆ ಕಾಂಗ್ರೆಸ್, ಶಿವಸೇನೆ ಸೇರಿದಂತೆ 15 ಕ್ಕೂ ಹೆಚ್ಚು ಪಕ್ಷಗಳು ಬೆಂಬಲ ಸೂಚಿಸಿದ್ದು, ನಾಳೆ ದೇಶಾದ್ಯಂತ ರೈತರ ಪ್ರತಿಭಟನೆ ನಡೆಯಲಿದೆ.