Sunday, July 3, 2022

Latest Posts

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ತಾಯಿ ಮಗ ಸ್ಥಳದಲ್ಲಿಯೇ ಸಾವು

ಹೊಸದಿಗಂತ ವರದಿ, ಅಂಕೋಲಾ:

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗ ಸ್ಥಳದಲ್ಲಿಯೇ ಮೃತಪಟ್ಟ ಇಲ್ಲಿನ ರಾಮನಗುಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಡೆದಿದೆ.
ಇಲ್ಲಿನ ಅಚವೆ ಅಂಗಡಿಬೈಲ ನಿವಾಸಿಗಳಾದ ಹರಿಹರ ರವಿ ಸಿದ್ದಿ ಮತ್ತು ಆತನ ತಾಯಿ ಬೇಬಿ ರವಿ ಸಿದ್ದಿ ಮೃತಪಟ್ಟ ದುರ್ದೈವಿಗಳಾಗಿದ್ದು
ಇವರು ಕೊಡ್ಲಗದ್ದೆಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಕಾರ್ಯಕ್ರಮಕ್ಕೆ ಹೋಗಿ ಮರಳಿ ಬರುವಾಗ ವಾಹನವೊಂದಕ್ಕೆ ಓವರ್ ಟೇಕ್ ಮಾಡುವಾಗ ಎದುರಿನಿಂದ ವಾಹನ ಬಂದ ಕಾರಣ ರಸ್ತೆ ಪಕ್ಕದ ಕಂಬಕ್ಕೆ ಡಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ.
ಅಂಕೋಲಾ ಸಿಪಿಐ ಕೃಷ್ಣಾನಂದ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss