Thursday, July 7, 2022

Latest Posts

ವಿದ್ಯುತ್ ತಂತಿ ತಗುಲಿ ಬಸ್’ಗೆ ಬೆಂಕಿ: 8 ಮಂದಿ ದುರ್ಮರಣ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬಸ್​ಗೆ ವಿದ್ಯುತ್ ತಂತಿ ತಗುಲಿ, ಬೆಂಕಿ ಹತ್ತಿದ ಪರಿಣಾಮ 8 ಜನರು ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಘಟನೆ ಶನಿವಾರ ತಡರಾತ್ರಿ ರಾಜಸ್ಥಾನದ ಜಲೋರ್ ಜಿಲ್ಲೆಯ ಮಹೇಶಪುರದಲ್ಲಿ ನಡೆದಿದೆ.

ಜೈನ ಸಮುದಾಯದ ಪ್ರವಾಸಿಗರು ಎರಡು ಬಸ್​ಗಳಲ್ಲಿ, ನಿಕೋಡಾಜಿ ಮತ್ತು ಮಂಡೋಲಿ ನಗರಕ್ಕೆ ಪ್ರಯಾಣಿಸಿದ ನಂತರ ಬೀವರ್‌ಗೆ ಹಿಂದಿರುಗುತ್ತಿದ್ದರು. ಈ ವೇಳೆ  ಚಾಲಕ ದಾರಿ ತಿಳಿಯದೆ ಮಹೇಶಪುರ ಕಡೆಗೆ ಹೋಗಿದ್ದಾನೆ.  ದಾರಿ ತಪ್ಪಾಗಿರುವುರು ತಿಳಿದು ವಾಪಸ್ ಬರುತ್ತಿರುವ ವೇಳೆ ವಿದ್ಯುತ್ ತಂತಿ ಬಸ್’ಗೆ ತಗುಲಿ ಬೆಂಕಿ ಹತ್ತಿಕೊಂಡಿದೆ.

ಈ ಅವಘಡದಲ್ಲಿ ಕಂಡಕ್ಟರ್ ಸೇರಿದಂತೆ 8 ಜನ ಮೃತಪಟ್ಟಿದ್ದಾರೆ.  ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss