ವಿದ್ಯುತ್ ಶಾಕ್: 10 ವರ್ಷದಲ್ಲಿ ಪ್ರಾಣ ಕಳೆದುಕೊಂಡದ್ದು 553 ಕಾಡು ಪ್ರಾಣಿಗಳು

0
103

ಕಾಸರಗೋಡು: ಕಾಸರಗೋಡು ಸಹಿತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಳೆದ ಹತ್ತು ವರ್ಷದಲ್ಲಿ ವಿದ್ಯುತ್ ಶಾಕ್ ತಗುಲಿ ಒಟ್ಟು 553 ಕಾಡು ಪ್ರಾಣಿಗಳು ಸಾವನ್ನಪ್ಪಿವೆ. ಕಾಡು ಪ್ರಾಣಿಗಳ ಉಪಟಳ ತಡೆಗಟ್ಟಲು ನಿರ್ಮಿಸುವ ವಿದ್ಯುತ್ ಬೇಲಿ, ಮುರಿದು ಬಿದ್ದ ವಿದ್ಯುತ್ ತಂತಿ, ಆರ್ಥ್ ವಯರ್ ಇತ್ಯಾದಿಗಳನ್ನು ಸ್ಪರ್ಶಿಸಿ ಶಾಕ್ ತಗಲಿ ಸಾವನ್ನಪ್ಪಿದ ಕಾಡು ಪ್ರಾಣಿಗಳ ಸಂಖ್ಯೆ ಇದಾಗಿದೆ. ಇದು ವಿದ್ಯುತ್ ಇಲಾಖೆಯ ಲೆಕ್ಕಾಚಾರವಾಗಿದೆ.

2014-2019ರ ಮಧ್ಯೆ ಅವಧಿಯಲ್ಲಿ ಮಾತ್ರವಾಗಿ 312 ಪ್ರಾಣಿಗಳು ಸಾವನ್ನಪಿದೆ. 2009-2014ರಲ್ಲಿ ಈ ಸಂಖ್ಯೆ 233 ಆಗಿತ್ತು. 2019ರಲ್ಲಿ ಏಪ್ರಿಲ್‌ನಿಂದ ಸೆಪ್ಟಂಬರ್ ತಿಂಗಳೊಳಗಾಗಿ 45 ಕಾಡು ಪ್ರಾಣಿಗಳು ವಿದ್ಯುತ್ ಶಾಕ್ ತಗುಲಿ ಪ್ರಾಣ ಕಳೆದುಕೊಂಡಿದೆ.
ಹೀಗೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ ಕಾಡು ಪ್ರಾಣಿಗಳಲ್ಲಿ ಅನೆಗಳೂ ಸೇರಿವೆ. ಇದರ ಹೊರತಗಿ ಜಾನುಗಾರುಗಳಾದ ದನ, ಆಡುಗಳು ಇತ್ಯಾದಿಗಳೂ ಒಳಗೊಂಡಿವೆ. ಇದರಲ್ಲಿ  ಹೆಚ್ಚಿನ ಸಾವು ಮುರಿದು ಬಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಉಂಟಾಗಿದೆ ಎಂದು ಚೀಫ್ ಇಲೆಕ್ಟ್ರೀಕಲ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ನಿರ್ಮಿಸಲಾಗುತ್ತಿರುವ ವಿದ್ಯುತ್ ಚಾಲಿತ ತಂತಿಗಳು ಕಾಡು ಪ್ರಾಣಿಗಳ ಪ್ರಾಣ ಕಸಿದುಕೊಳ್ಳುತ್ತಿವೆ. ಇಲೆಕ್ಟ್ರಿಕಲ್ ಎನರ್ಜಿಕ್ಸ್ ಎಂಬ ಉಪಕರಣ ಬಳಸದೆ, ವಿದ್ಯುತ್ ಕಂಬದಿಂದ ನೇರವಾಗಿ ವಿದ್ಯುತ್ ತಂತಿ ಎಳೆದು ವಿದ್ಯುತ್ ಬೇಲಿ ನಿರ್ಮಿಸುವುದೇ ಇಂತಹ ವಿದ್ಯುತ್ ಅಪಘಾತಗಳಿಗೆ ಪ್ರಧಾನ ಕಾರಣವಾಗುತ್ತಿದೆ. ವಿದ್ಯುತ್ ಇನ್ಸ್‌ಪೆಕ್ಟರ್‌ರ  ಅನುಮತಿ ಪಡೆಯದೇ ಹೆಚ್ಚಿನೆಡೆಗಳಲ್ಲಿ ವಿದ್ಯುತ್ ಬೇಲಿ ನಿರ್ಮಿಸಲಾಗುತ್ತಿದೆ. ಇಲೆಕ್ಟ್ರಿಕ್ ಫೆನ್ಸ್ ಎನರ್ಜೈಸರ್ ಅಳವಡಿಸಿದ್ದಲ್ಲಿ ಇಂತಹ ಮಾರಕ ಆಘಾತಗಳನ್ನು ಹೊರತುಪಡಿಸಬಹುದು. ಇಂತಹ ಉಪಕರಣ ಬಳಸಿದ ವಿದ್ಯುತ್ ಬೇಲಿ ಶಾಕ್ ತಗಲಿದ್ದಲ್ಲಿ ಅದು ಕಾಡು ಪ್ರಾಣಿಗಳನ್ನು ಶಾಕ್‌ನಿಂದ ದೂರಕ್ಕೆ ಎಸೆಯುವಂತೆ ಮಾಡುತ್ತದೆ. ಬಳಸದೆ ವಿದ್ಯುತ್ ಬೇಲಿ ನಿರ್ಮಿಸಿದ್ದಲ್ಲಿ 230 ವಾಲ್ಟ್ ವಿದ್ಯುತ್ ತಂತಿಯಲ್ಲಿ  ಪ್ರವಹಿಸುವುದು. ಅದನ್ನು ಸ್ಪರ್ಶಿಸಿ ಶಾಕ್ ತಗಲಿದ್ದಲ್ಲಿ ಅತೀ ಶೀಘ್ರ ಸಾವು ಸಂಭವಿಸುತ್ತದೆ.

LEAVE A REPLY

Please enter your comment!
Please enter your name here