Monday, July 4, 2022

Latest Posts

ವಿಧವೆಯರ ಸಂರಕ್ಷಣೆ ಮತ್ತು ಅಭಿವೃದ್ಧಿ ಉದ್ದೇಶದ ‘ಕೂಟ್’ ಯೋಜನೆ ಮೂಲಕ ಗಾರ್ಮೆಂಟ್ ಘಟಕ ಶೀಘ್ರದಲ್ಲಿ ಆರಂಭ

ಕಾಸರಗೋಡು: ಕಾಸರಗೋಡು ಜಿಲ್ಲೆಯ ವಿಧವೆಯರ ಸಂರಕ್ಷಣೆ ಮತ್ತು ಅಭಿವೃದ್ಧಿ ಉದ್ದೇಶದಿಂದ ಜಿಲ್ಲಾಡಳಿತ
ಮತ್ತು ಮಹಿಳಾ ಸಂರಕ್ಷಣೆ ವಿಭಾಗ ಇವುಗಳ ನೇತೃತ್ವದಲ್ಲಿ ರಚಿಸಿರುವ ‘ಕೂಟ್’ ಯೋಜನೆಯಂತೆ ಗಾರ್ಮೆಂಟ್ ನಿರ್ಮಾಣ ಘಟಕ ಶೀಘ್ರದಲ್ಲೇ ಆರಂಭವಾಗಲಿದೆ.
ಯೋಜನೆಯ ಅಂಗವಾಗಿ ಕಾಞಂಗಾಡಿನ ವೆಳ್ಳಿಕೋತ್ ಇನ್ ಸ್ಟಿಟ್ಯೂಟ್ ಮುಖಾಂತರ ವಿಧವೆಯರಿಗೆ ಉಚಿತ ರೂಪದ ಹೊಲಿಗೆ ತರಬೇತಿ ನೀಡಲಾಗುವುದು.‌ ತರಬೇತಿಗೆ ಆಯ್ಕೆಗೊಂಡವರಿಗೆ ಉಚಿತ ವಸತಿ, ಭೋಜನ ವ್ಯವಸ್ಥೆ ಇರಲಿದೆ.
ಕಾಸರಗೋಡು, ಕಾರಡ್ಕ , ಮಂಜೇಶ್ವರ ಬ್ಲಾಕ್ ಗಳ 45 ವರ್ಷ ಪ್ರಾಯ ಮೀರದ, ಕುಟುಂಬದ ಜವಾಬ್ದಾರಿ ವಹಿಸಿರುವ ವಿಧವೆಯರು
(ವಿಧವೆಯರ ಜೊತೆಗೆ ವಿಚ್ಛೇದನ ಪಡೆದ ಮಹಿಳೆಯರು, ಪತಿ ನಾಪತ್ತೆಯಾಗಿ ಅನೇಕ ವರ್ಷ ಸಂದರೂ, ಪತಿಯ ಬಗ್ಗೆ ಮಾಹಿತಿಯಿಲ್ಲದವರು) ಈ ತರಬೇತಿ ಪಡೆಯಲು ಅರ್ಹರಾಗಿದ್ದಾರೆ.
ಬಿಳಿಹಾಳೆಯಲ್ಲಿ ಸಿದ್ಧಪಡಿಸಿದ ಅರ್ಜಿಯನ್ನು ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯದಲ್ಲಿರುವ ಮಹಿಳಾ ಸಂರಕ್ಷಣೆ ಕಚೇರಿಗೆ ಅಂಚೆ ಮೂಲಕ ಅಥವಾ ಇ-ಮೇಲ್ ಮೂಲಕ ಜು.4ರ ಮುಂಚಿತವಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಮಹಿಳಾ ಸಂರಕ್ಷಣೆ ಕಚೇರಿ, ಸಿವಿಲ್ ಸ್ಟೇಷನ್ ಮೂರನೇ ಅಂತಸ್ತು, ಕಾಸರಗೋಡು ಅಥವಾ ಈ- ಮೇಲ್ : [email protected]
ದೂರವಾಣಿ ಸಂಖ್ಯೆ: 04994-256266, 9446494919 ಕರೆ ಮಾಡಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss