Friday, January 22, 2021

Latest Posts

ವಿಧಾನಸಭೆ, ವಿಧಾನ ಪರಿಷತ್ ಉಪ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳದ್ದೇ ಗೆಲುವು: ರಾಜ್ಯಾಧ್ಯಕ್ಷ ನಳಿನ್ ವಿಶ್ವಾಸ

ಬಳ್ಳಾರಿ: ಆರ್.ಆರ್.ನಗರ, ಶಿರಾ ವಿಧಾನಸಭೆ ಕ್ಷೇತ್ರ ಹಾಗೂ ವಿಧಾನ ಪರಿಷತ್ ಉಪ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ದಾಖಲೆ ಮತಗಳ ಅಂತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಹೊಸಪೇಟೆ ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸಂಜೆ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ‌ ನಿಮಿತ್ತ ಆಯೋಜಿಸಿದ್ದ ಮತಯಾಚನೆ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಪಕ್ಷ ಆಡಳಿತದಲ್ಲಿ ಇಲ್ಲದಿದ್ದರೂ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನ ಪರಿಷತ್ ಅಲ್ಲಿ ಕಾರ್ಯನಿರ್ವಸಿಸಿದವರು ಇದ್ದರು. ಈಗ ಎರಡೂ ಕಡೆ ಪಕ್ಷದ ಆಡಳಿತ ಇರುವುದರ ಜೊತೆ ವಿಧಾನ ಪರಿಷತ್ ಅಲ್ಲೂ ಪಕ್ಷದ ಅಭ್ಯರ್ಥಿಗಳು ಇದ್ದಾಗ ಹಲವು ಮಸೂದೆಗಳನ್ನು ಕಾರ್ಯಗತಗೊಳಿಸಲು ಸಾಧ್ಯ ಎಂದರು. ದೇಶದಲ್ಲಿ ಶಿಕ್ಷಣವು ಪೂಜ್ಯಕ್ಷೇತ್ರವಾಗಿದೆ. ಹಿಂದೆ ಗುರುಕುಲ ಪದ್ಧತಿಯನ್ನು ಟೀಕೆ ಮಾಡುವವರಿದ್ದರು. ಆದರೆ, ಮೆಕಾಲೆಯು ಜಾರಿಗೊಳಿಸಿದ ಶಿಕ್ಷಣ ನೀತಿ ನಂತರ ಶಿಕ್ಷಣ ವೃಥವಾಗದೆ ವ್ಯಾಪಾರವಾಯಿತು. ಶಿಕ್ಷಣವು ಇದೇ ರೀತಿ ವ್ಯಾಪಾರೀಕರಣವಾದರೇ ವೃಥವಾಗುವುದೇ ಇಲ್ಲ. ಅದಕ್ಕಾಗಿ ನೂತನ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ. ಇದು ಪಕ್ಷ ಅಥವಾ ಸರ್ಕಾರದದ ಶಿಕ್ಷಣ ನೀತಿಯಲ್ಲ, ಭಾರತದ ಶಿಕ್ಷಣ ನೀತಿ, ಶಿಕ್ಷಣದಲ್ಲಿ ಬದಲಾವಣೆ ಹಂತ ಬಂದು ಶೈಕ್ಷಣಿಕ ಕ್ಷೇತ್ರ ಪರಿವರ್ತನೆಯಾಗಲಿದೆ ಎಂದರು.
ವರ್ಷಕ್ಕೆ 10 ಲಕ್ಷ ಪದವಿಧರರಲ್ಲಿ 3 ಲಕ್ಷ ಪದವಿಧರರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ. ಈ ಕಾರಣಕ್ಕಾಗಿ ಪ್ರಧಾನ ಮಂತ್ರಿಗಳು ಕೌಶಲ್ಯಾಭಿವೃದ್ಧಿ ಯೋಜನೆ ಜಾರಿಗೆ ತರುವ ಮೂಲಕ ಉದ್ಯೋಗ ದೊರಕಿಸಿಕೊಡುತ್ತಿದ್ದಾರೆ. ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿವೆ ಅವುಗಳ ನಿವಾರಣೆಗೆ ಅನುದಾನಗಳನ್ನು ನೀಡುತ್ತಾ ಬಂದಿದೆ ಅದೇ ರೀತಿಯಾಗಿ ಕೋವಿಡ್19 ಸಾಂಕ್ರಾಮಿಕ ರೋಗ ಕಾಲದಲ್ಲೂ ಶಿಕ್ಷಕರಿಗೆ ಪೂರ್ಣ ವೇತನ ನೀಡಿದೆ. ಪಕ್ಷದ ಅಭ್ಯರ್ಥಿಯಾದ ಶಶೀಲ್ ನಮೋಶಿ ಅವರು ಪ್ರಾಮಾಣಿಕ ಹಾಗೂ ಅಧ್ಯಯನಗಳ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸುವ ಅಭ್ಯರ್ಥಿಯಾಗಿದ್ದು ತಮ್ಮ ಮತಗಳನ್ನು ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ನಂತರ ಅಭ್ಯರ್ಥಿ ನಮೋಶಿ ಮಾತನಾಡಿ, ಪ್ರತಿ ಚುನಾವಣೆ ಮಹತ್ವದ್ದು, ವಿಧಾನಸಭೆಗೆ ಬರುವ ಕಾಯಿದೆಗಳು ಜಾರಿಯಾಗಲು ವಿಧಾನ ಪರಿಷತ್ ಬೆಂಬಲ ಬೇಕು, ಕಳೆದ ಚುನಾವಣೆಯಲ್ಲಿ ಕೆಲ ಕಾರಣಾಂತರಗಳಿಂದ ಸೋತಿದ್ದೇವೆ, ಕಾಂಗ್ರೆಸ್ ಪಕ್ಷ ಶಿಕ್ಷಣಕ್ಕೆ ಯಾವುದೇ ಒತ್ತು ನೀಡಿಲ್ಲ ಶಿಕ್ಷಣ ಇಲಾಖೆಯು ಲಾಭದಾಯಕ ಇಲಾಖೆಯಲ್ಲ ಎಂಬುದು ಪ್ರತಿಪಕ್ಷಗಳ ಅನಿಸಿಕೆಯಾಗಿದೆ, 200 ವರ್ಷದ ಹಿಂದಿನ ಮೆಕಾಲೆ ಶಿಕ್ಷಣ ನೀತಿಯನ್ನೇ ಅನುಸರಿಸುತ್ತಾ ಬಂದಿದೆ. ಆದರೆ ನಮ್ಮ ಪಕ್ಷವು ಶೈಕ್ಷಣಿಕ ಅಭಿವೃದ್ಧಿ ಜೊತೆ ಹಿಂದುಳಿದ ಭಾಗಗಳಿಗೆ ಉನ್ನತ ಯೋಜನೆ ನೀಡಲು ಹಾಗೂ ಶಿಕ್ಷಣ ನೀತಿ ಜಾರಿಗೆ ತರುವ ಪ್ರಯತ್ನ ಮಾಡುತ್ತೇವೆ. ಶಿಕ್ಷಣ ಇಲಾಖೆಯ ಯಾರಿಗೂ ಸಂಬಳ ಕಡಿತ ಮಾಡಿಲ್ಲ, ಶಿಕ್ಷಕರ ಹಲವು ಬೇಡಿಕೆ ಈಡೇರಿಕೆ ಜೊತೆಗೆ ಹಾಗೂ ಇಲಾಖೆಯ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಪ್ರಯತ್ನ ಮಾಡಲಾಗುತ್ತದೆ. ಈಗಾಗಲೇ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಬಾರಿ ಖಂಡಿತ ಗೆಲ್ಲುವ ವಿಶ್ವಾಸವಿದೆ ಎಂದರು.
ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮಾತನಾಡಿ, ಆರ್.ಆರ್. ನಗರದಲ್ಲಿ ಡಿಕೆ ಶಿವಕುಮಾರ್ ಬಣವನ್ನು ಸೋಲಿಸಲು ಕಾಂಗ್ರೆಸ್ ನಾಯಕರೇ ಕಾರಣವಾಗುತ್ತಿದ್ದಾರೆ. ಶಿರಾದಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರರ ಕ್ಷೇತ್ರ ಅಭಿವೃದ್ಧಿ ಶೂನ್ಯವಾಗಿದೆ. ಈ ಬಾರಿ ಬಿಜೆಪಿಗೆ ಬೆಂಬಲವನ್ನು ಜನರು ಸೂಚಿಸಲಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪದವೀಧರರು ಸರಿಯಾಗಿ ಮತವನ್ನು ಮಾಡಬೇಕು. ಕಳೆದ ಬಾರಿ ಶ್ರೀನಿವಾಸ ರೆಡ್ಡಿಯವರು 2000 ಅಮಾನ್ಯ ಮತಗಳಿಂದಲೇ ಸೋತಿದ್ದಾರೆ. ಆದ್ದರಿಂದ ಪದವೀಧರ ಮತದಾರರು ಅವಲೋಕಿಸಿ ಮತದಾನ ಮಾಡಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮಾತನಾಡಿ, ಸಂಘಟನೆ ಬೇರು ಮಟ್ಟದಲ್ಲಿ ಬೆಳೆಯಲಿ ಎಂದು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲು ಪಕ್ಷದ ಮುಖಂಡರು ಸೂಚನೆ ನೀಡುತ್ತಾರೆ. ದೇಶವನ್ನು ಎತ್ತರಕ್ಕೆ ಕೊಂಡ್ಯೊಯ್ಯುವ ಕಾರ್ಯವು ಮೋದಿಯವರಿಗೆ ಸಿದ್ಧಿಸಿದೆ. ಅವರೊಂದಿಗೆ ನಾವು ಕೈಜೋಡಿಸಬೇಕು  ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ, ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ, ರಾಜ್ಯ ಕಾರ್ಯದರ್ಶಿ ಅಶ್ವತ್ಥ ನಾರಾಯಣ್, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ವಿಭಾಗದ ಪ್ರಾಭಾರಿ ಸಿದ್ದೇಶ್, ಹುಡಾ ಅಧ್ಯಕ್ಷ ಅಶೋಕ ಜೀರೆ, ನೇಮಿರಾಜ್ ನಾಯ್ಕ, ಸಚ್ಚಿದಾನಂದ, ಮಣಿಪಾಲ್, ರಾಮಲಿಂಗಪ್ಪ, ಗುರುಲಿಂಗನಗೌಡ, ಮೋತ್ಕರ್ ಶ್ರೀನಿವಾಸ್, ಯುವ ಮೋರ್ಚಾ ಉಪಾಧ್ಯಕ್ಷ ರಘು ಇತರರು ಇದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!