Thursday, August 11, 2022

Latest Posts

ವಿಧಾನ ಪರಿಷತ್‌ಗೆ ವಿಶ್ವನಾಥ್,ಎಂಟಿಬಿ ನಾಗರಾಜ್, ಶಂಕರ್ ಹೆಸರು ಶಿಫಾರಸ್ಸು: ಸಚಿವ ಎಸ್.ಟಿ ಸೋಮಶೇಖರ್

ಮೈಸೂರು: ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನಾಗಿಸಲು ಮಾಜಿ ಸಚಿವ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಶಂಕರ್ ಹೆಸರನ್ನ ಶಿಫಾರಸ್ಸು ಮಾಡಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು , ಬಿಜೆಪಿ ಕೋರ್ ಕಮಿಟಿಯಲ್ಲಿ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಶಂಕರ್ ಈ ಮೂವರ ಹೆಸರು ಅಂತಿಮವಾಗಿದೆ. ಕೋರ್ ಕಮಿಟಿ ತನ್ನ ಪಟ್ಟಿಯನ್ನ ಹೈಕಮಾಂಡ್ ಗೆ ಕಳುಹಿಸಿದೆ. ಸಂಜೆ ವೇಳೆಗೆ ಅಧಿಕೃತ ಆದೇಶ ಬರಲಿದೆ ಎಂದು ಮಾಹಿತಿ ನೀಡಿದರು.
ಮೂವರು ಒಂದೇ ಕೋಮಿನವರು ಎಂಬ ಪ್ರಶ್ನೆಗಳು ಈಗ ಇಲ್ಲ. ಈ ಮೂವರು ರಾಜೀನಾಮೆ ಕೊಟ್ಟಿರುವುದಕ್ಕೆ ಸರ್ಕಾರ ಬಂದಿರುವುದು. ಸಿಎಂ ಕೊಟ್ಟ ಭರವಸೆಯೇನು ಎಂಬುದು ನಮಗೂ ಗೊತ್ತು ಅವರಿಗೂ ಗೊತ್ತು, ಅಶ್ವತ್ ನಾರಾಯಣ್ ಕೋರ್ ಕಮಿಟಿಯಲ್ಲಿ ಇಲ್ಲ. ಅಲ್ಲಿ ಏನ್ ತೀರ್ಮಾನ ಆಗಬೇಕೋ ಅದೆಲ್ಲ ಆಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss