spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಧಾನ ಪರಿಷತ್‌ನ ಸದಸ್ಯನಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಬಗ್ಗೆ ಹೆಮ್ಮೆ ಇದೆ: ಐವನ್ ಡಿಸೋಜ

- Advertisement -Nitte

ಮಂಗಳೂರು: ವಿಧಾನ ಪರಿಷತ್‌ನ ಸದಸ್ಯನಾಗಿ ಆರು ವರ್ಷಗಳ ಅವಧಿಯಲ್ಲಿ ಸದನದಲ್ಲಿ ಶೇ.100 ಹಾಜರಾತಿ ದಾಖಲಿಸಿದ್ದೇನೆ. ಅಧಿವೇಶನದಲ್ಲಿ ಶೇ.100 ರಷ್ಟು ಪ್ರಶ್ನೆಗಳನ್ನು ಕೇಳಿ ಎಲ್ಲ ಇಲಾಖೆಗಳ ಅಭಿವೃದ್ಧಿ ಮತ್ತು ಯೋಜನೆಗಳ ಬಗ್ಗೆ ಗಮನ ಸೆಳೆದು, ಸರಕಾರ ಸ್ಪಂದಿಸುವಂತೆ ಮಾಡಿದ್ದೇನೆ. ವಿವಿಧ ಮೂಲಗಳಿಂದ ಅಭಿವೃದ್ಧಿಗಾಗಿ 46 ಕೋಟಿ ರೂ. ಒದಗಿಸಿದ್ದೇನೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1600 ಕ್ಕೂ ಹೆಚ್ಚು ಅರ್ಜಿದಾರರಿಗೆ ಒಟ್ಟು 6.62 ಕೋಟಿ ರೂ. ಮೊತ್ತ ದೊರಕಿಸಿಕೊಟ್ಟ ತೃಪ್ತಿ ತನಗಿದೆ ಎಂದು ವಿಧಾನಪರಿಷತ್ ನಿರ್ಗಮನ ಸದಸ್ಯ ಐವನ್ ಡಿಸೋಜ ಹೇಳಿದರು.
ವಿಧಾನ ಪರಿಷತ್ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮನಪಾ ಕಟ್ಟಡದಲ್ಲಿರುವ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿದ ಅವರು, ಸರಕಾರಿ ಮುಖ್ಯ ಸಚೇತಕನಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಬಗ್ಗೆ ಹೆಮ್ಮೆ ಇದೆ. ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿಯಾಗಿ ರಾಜ್ಯಾದ್ಯಂತ ಪ್ರವಾಸ ನಡೆಸಿ ಜನರ ಸೇವೆ ಮಾಡಿದ್ದೇನೆ ಎಂದರು.
ಅಧಿವೇಶನದಲ್ಲಿ ಚರ್ಚೆಗಳಲ್ಲಿ ಭಾಗವಹಿಸುವ ಜತೆಗೆ ಸದನದಲ್ಲಿ ಬೀಡಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರ ಬಗ್ಗೆ ಗಮನ ಸೆಳೆದು ಸದನವೀರ ಪ್ರಶಸ್ತಿಯನ್ನೂ ಪಡೆದಿರುವ ಬಗ್ಗೆ ತೃಪ್ತಿ ಇದೆ. ಸೋಲಾರ್ ವಿದ್ಯುತ್ ಮೇಲ್ಛಾವಣಿ ಘಟಕ ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದನೆಗೆ ಹೆಚ್ಚು ಗಮನ ನೀಡಬೇಕೆಂದು ಪ್ರಸ್ತಾಪಿಸಿ, ದ.ಕ. ಜಿಲ್ಲೆಯಲ್ಲಿ ಅಭಿಯಾನ ಆರಂಭಿಸಿ ರಾಜ್ಯದಲ್ಲಿ ಸೌರಶಕ್ತಿ ಉತ್ಪಾದನೆಯಲ್ಲಿ ದ.ಕ. ಜಿಲ್ಲೆ 2ನೆ ಸ್ಥಾನ ಪಡೆಯುವಲ್ಲಿ ಶ್ರಮ ವಹಿಸಿರುವುದಾಗಿ ಅವರು ಹೇಳಿದರು.
ಶಾಸಕರ ನಿಧಿಯಿಂದ ಸರಕಾರಿ ಮತ್ತು ಅನುದಾನಿತ 25 ಶಾಲೆಗಳಿಗೆ 3 ಕಿ.ವ್ಯಾಟ್‌ನ ಸೌರಶಕ್ತಿ ಘಟಕಗಳನ್ನು ಒದಗಿಸಿದ್ದೇನೆ. ಪೆರಾಬೆಯ ಎಂಡೋಪೀಡಿತರ ಮನೆಗಳಿಗೆ ಸೌರಶಕ್ತಿ ನೀಡುವ ಕಾರ್ಯ ಮಾಡಲಾಗಿದೆ. 63 ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿದ್ದು, ಪತ್ನಿ ಡಾ. ಕವಿತಾ ಡಿಸೋಜ ಸಹಾಯದಿಂದ  3250ಕ್ಕೂ ಅಧಿಕ ಉಚಿತ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ, 3500 ಕ್ಕೂ ಅಧಿಕ ಜನರಿಗೆ ಉಚಿತ ಕನ್ನಡಕವನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.
68 ರಿಕ್ಷಾ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.  ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹೋರಾಟ ನಡೆಸಿದ ಪರಿಣಾಮ ಬಜೆಟ್‌ನಲ್ಲಿ 200 ಕೋಟಿ ರೂ. ಅನುದಾನದೊಂದಿಗೆ ಸರಕಾರ ನಿಗಮ ಸ್ಥಾಪಿಸಿದೆ ಎಂದರು.
ಐವನ್ ಡಿಸೋಜ ಅಭಿಮಾನಿ ಬಳಗ ವತಿಯಿಂದ ಈ ಸಂದರ್ಭ ಅವರನ್ನು ಸನ್ಮಾನಿಸಲಾಯಿತು. ಶಾಸಕ ಯು.ಟಿ.ಖಾದರ್, ಪ್ರಮುಖರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ,  ನಾಗೇಂದ್ರ ಕುಮಾರ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss