spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಗೆ ಕೊರೋನಾ ಪಾಸಿಟಿವ್

ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಈ ಬಗ್ಗೆ ಸ್ವತಃ ಐವನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ‘ನನಗೆ ಮತ್ತು ನನ್ನ ಪತ್ನಿ ಡಾ. ಕವಿತಾಗೆ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ನಮಗಿಬ್ಬರಿಗೂ ಕೊರೋನಾದ ಯಾವುದೇ ಲಕ್ಷಣ ಇರಲಿಲ್ಲ. ಆದರೂ, ನಾವು ಸ್ವಯಂಪ್ರೇರಿತರಾಗಿ ಗಂಟಲ ದ್ರವದ ಮಾದರಿಯ ಪರೀಕ್ಷೆಗೆ ಒಳಗಾಗಿದ್ದೆವು. ಇದರಿಂದಾಗಿ ಆತಂಕಪಡಬೇಕಾಗಿಲ್ಲ. ನಮ್ಮ ಗೆಳೆಯರು ಮತ್ತು ಹಿತೈಷಿಗಳು ನಮ್ಮನ್ನು ಭೇಟಿಯಾಗುವುದು ಬೇಡ. ನಿಮ್ಮ ಪ್ರಾರ್ಥನೆ, ಹಾರೈಕೆ ನಮ್ಮ ಶಕ್ತಿ’ ಎಂದು ಫೇಸ್‌ಬುಕ್‌ನಲ್ಲಿ ಐವನ್ ಡಿಸೋಜ ಬರೆದುಕೊಂಡಿದ್ದಾರೆ.
ಶುಕ್ರವಾರ ಡಿಕೆಶಿ ಜತೆಗಿದ್ದ ಐವನ್ 
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ನಗರದಲ್ಲಿ ಬಿಷಪ್ ಹೌಸ್, ಜಿಲ್ಲಾ ಕಾಂಗ್ರೆಸ್ ಕಚೇರಿ ಭೇಟಿ, ಸುದ್ದಿಗೋಷ್ಠಿ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಈ ಎಲ್ಲ ಕಡೆ ಐವನ್ ಅವರು ಜತೆಗಿದ್ದರು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದವರಿಗೆ ಈಗ ಆತಂಕ ಶುರುವಾಗಿದೆ. ಜತೆಗಿದ್ದ ಐವನ್‌ಗೆ ಕೊರೋನಾ ಪಾಸಿಟಿವ್ ಕಂಡುಬಂದಿರುವುದರಿಂದ ಡಿಕೆಶಿ ಅವರು ಕ್ವಾರಂಟೈನ್‌ಗೆ ಒಳಗಾಗುತ್ತಾರೆಯೇ ಎಂಬ ಪ್ರಶ್ನೆಗಳೂ ಎದ್ದಿವೆ.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap