ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸಹಿತ ಆರೋಪಿಗಳಿಂದ ಸಂಗ್ರಹಿಸಲಾಗಿದ್ದ ತಲೆ ಕೂದಲು ಮಾದರಿ ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲದಿಂದ ರಿಜೆಕ್ಟ್ ಆಗಿದೆ.
ತಲೆ ಕೂದಲು ಸಂಗ್ರಹಿಸಿದ ವಿಧಾನ ವೈಜ್ಞಾನಿಕವಾಗಿಲ್ಲ ಎಂದು ಹೇಳಿರುವ ಪ್ರಯೋಗಾಲಯದ ತಜ್ಞರು, ಇದರಿಂದ ಆರೋಪಿಗಳು ಮಾದಕ ವ್ಯಸನಿಗಳು ಹೌದೋ ಅಲ್ಲವೋ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದಿದೆ.
ಬಂಧಿತ ಆರೋಪಿಗಳು ಮಾದಕ ವ್ಯಸನಿಗಳು ಎನ್ನುವ ಅನುಮಾನವಿದ್ದು, ಈ ವಿಚಾರವನ್ನು ದೃಢಪಡಿಸಿಕೊಳ್ಳುವ ಸಲುವಾಗಿ ನ್ಯಾಯಾಲಯದ ಅನುಮತಿಯ ಮೇರೆಗೆ ತಲೆ ಕೂದಲು ಸೇರಿದಂತೆ ಮೂತ್ರ ಹಾಗೂ ರಕ್ತ ಪರೀಕ್ಷೆಗೆ ಮಾದರಿಯನ್ನು ಸಂಗ್ರಹ ಮಾಡಲಾಗಿತ್ತು.
ರಕ್ತ, ಮೂತ್ರದ ಮಾದರಿ ಪ್ರಯೋಗಾಲಯದಲ್ಲಿ ಇವೆ. ತಲೆ ಕೂದಲು ಪರೀಕ್ಷೆಯನ್ನು ಇದೇ ಮೊದಲ ಬಾರಿಗೆ ಮಾಡಿಸಲಾಗಿದೆ, ಸಣ್ಣದಾದ ತಾಂತ್ರಿಕ ಕಾರಣದಿಂದ ಹೀಗಾಗಿದೆ ಎಂದು ಸಿಸಿಬಿಯ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದ್ದಾರೆ.