Saturday, July 2, 2022

Latest Posts

ವಿನಯ್ ರಾಜ್ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ , ಜೂನ್ ೨೫ಕ್ಕೆ ಟೆನ್ ಸಿನಿಮಾದ ಟೀಸರ್ ಲಾಂಚ್

ವಿನಯ್ ರಾಜ್‌ಕುಮಾರ್ ಸಿನಿಮಾ  ತೆರೆಮೇಲೆ ಬರದೆ ಎರಡು ವರ್ಷ ಕಳೆದಿದೆ.ಅನಂತು ವರ್ಸಸ್‌ ನುಸ್ರತ್ ಸಿನಿಮಾ ತೆರೆಯ ನಂತರ ಯಾವ ಸಿನಿಮಾ ಬಂದಿಲ್ಲ. . ಆದಾದ ಮೇಲೆ ವಿನಯ್ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡೇ ಇಲ್ಲ. ಅಲ್ಲಿಂದೀಚೆಗೆ ಅವರ ಯಾವ ಸಿನಿಮಾಗಳು ತೆರೆಕಂಡಿಲ್ಲ. ಹಾಗಂತ, ಅವರಿಗೆ ಅವಕಾಶಗಳಿಲ್ಲ ಎಂದಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ ಅವರು. ಸದ್ಯ ಅಭಿಮಾನಿಗಳಿಗೊಂದು ಗುಡ್‌ ನ್ಯೂಸ್ ನೀಡೋಕೆ ರೆಡಿ ಆಗಿದ್ದಾರೆ.ಖ್ಯಾತ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಬ್ಯಾನರ್‌ನಲ್ಲಿ ವಿನಯ್ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಬಹಳ ಹಿಂದೆಯೇ ಕೇಳಿಬಂದಿತ್ತು. ಇದೀಗ ಆ ಸಿನಿಮಾ ಕಂಪ್ಲೀಟ್ ಆಗಿ ರಿಲೀಸ್‌ಗೆ ಸಿದ್ಧವಾಗಿದೆ. ಚಿತ್ರಕ್ಕೆ ‘ಟೆನ್’ ಅಂತ ಶೀರ್ಷಿಕೆ ಇಡಲಾಗಿದೆ. ವಿಶೇಷವೆಂದರೆ, ಇಲ್ಲಿ ವಿನಯ್ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅವರ ಬಾಕ್ಸಿಂಗ್ ಲುಕ್‌ಗಳು ಸಖತ್ ವೈರಲ್ ಆಗಿವೆ. ಇದೀಗ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಲು ಮುಂದಾಗಿರುವ ಅವರು, ಜೂನ್‌ 25ರಂದು ‘ಟೆನ್‌’ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಲಿದ್ದಾರೆ.’ಕಿರಿಕ್‌ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’ ಸೇರಿದಂತೆ ರಕ್ಷಿತ್ ಶೆಟ್ಟಿ ಅವರ ಬಹುತೇಕ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿರುವ ಕರಮ್‌ ಚಾವ್ಲಾ ಈ ಸಿನಿಮಾವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.ವಿನಯ್‌ಗೆ ನಾಯಕಿಯಾಗಿ ಅನುಷಾ ರಂಗನಾಥ್‌ ನಟಿಸಿದ್ದಾರೆ. ಮಹತ್ವದ ಪಾತ್ರವೊಂದನ್ನು ಗೋಪಾಲಕೃಷ್ಣ ದೇಶಪಾಂಡೆ ನಿಭಾಯಿಸಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss