spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಮಾನ ನಿಲ್ದಾಣಗಳಲ್ಲಿ ಚೆಕ್-ಇನ್ ಆಗ ಬಯಸುವ ಪ್ರಯಾಣಿಕರಿಗೆ 100 ರೂ. ಸೇವಾ ಶುಲ್ಕ ವಿಧಿಸಿದ ಇಂಡಿಗೊ!

- Advertisement -Nitte

ಹೊಸದಿಲ್ಲಿ: ಇಂಡಿಗೊ ವಿಮಾನಯಾನ ಸಂಸ್ಥೆಯು ವಿಮಾನ ನಿಲ್ದಾಣದ ಕೌಂಟರ್‌ಗಳಲ್ಲಿ ಚೆಕ್-ಇನ್ ಆಗ ಬಯಸುವ ಪ್ರಯಾಣಿಕರಿಗೆ 100 ರೂ. ಸೇವಾ ಶುಲ್ಕ ವಿಧಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೋನಾ ಮಧ್ಯೆ ವಿಮಾನ ನಿಲ್ದಾಣದಲ್ಲಿ ಟಚ್ ಪಾಯಿಂಟ್‌ ತಗ್ಗಿಸಲು ವಿಮಾನಯಾನ ಸಚಿವಾಲಯವು ಮೇ ತಿಂಗಳಲ್ಲಿ ಪ್ರಯಾಣಿಕರಿಗೆ ವೆಬ್ ಚೆಕ್ – ಇನ್ ಕಡ್ಡಾಯಗೊಳಿಸಿತ್ತು.
ಇಂಡಿಗೊ, 2020ರ ಅಕ್ಟೋಬರ್ 17ರಿಂದ ವಿಮಾನ ನಿಲ್ದಾಣದ ಕೌಂಟರ್‌ಗಳಲ್ಲಿ ಚೆಕ್ – ಇನ್ ಮಾಡ ಬಯಸುವವರಿಗೆ 100 ರೂ. ಸೇವಾ ಶುಲ್ಕ ಪರಿಚಯಿಸಿದೆ ಎಂದು ಹೇಳಿಕೆ ತಿಳಿಸಿದೆ.
ನಮ್ಮ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಷನ್ ಬಳಸಿ ಸರ್ಕಾರದ ನಿರ್ದೇಶನದಂತೆ ಎಲ್ಲ ಪ್ರಯಾಣಿಕರನ್ನು ವೆಬ್ ಚೆಕ್-ಇನ್​ಗೆ ನಾವು ಪ್ರೋತ್ಸಾಹಿಸುತ್ತೇವೆ. ವಿಮಾನ ನಿಲ್ದಾಣದ ಕೌಂಟರ್‌ಗಳಲ್ಲಿನ ಚೆಕ್-ಇನ್ ಮಾಡಲು ಇಚ್ಛಿಸುವವರಿಗೆ ಈ ಶುಲ್ಕವು ಎಲ್ಲ ಬುಕಿಂಗ್‌ಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss