Monday, August 15, 2022

Latest Posts

ವಿರಾಜಪೇಟೆ| ಮಾಂಸ ವ್ಯಾಪಾರಿಯ ಹತ್ಯೆ ಯತ್ನ

ಮಡಿಕೇರಿ: ಗುಂಪೊಂದು ಮಾಂಸ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ವೀರಾಜಪೇಟೆಯಲ್ಲಿ ಮಂಗಳವಾರ ನಡೆದಿದೆ.

ಬೈಕ್ ನಲ್ಲಿ ಬಂದ ಯುವಕರ ಗುಂಪೊಂದು ಮಾಂಸ ವ್ಯಾಪಾರಿ ಯಾಕೂಬ್ ಖಾನ್ (55) ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿರುವುದಾಗಿ ಹೇಳಲಾಗಿದೆ.

ಯಾಕೂಬ್ ಖಾನ್ ಗಾಂಜಾ ವಿಚಾರದಲ್ಲಿ ನಡೆಯುತ್ತಿದ್ದ ಗುಂಪು ಘಷ೯ಣೆ ತಪ್ಪಿಸಲು ಮುಂದಾಗಿದ್ದರೆನ್ನಲಾಗಿದ್ದು, ಇದರಿಂದ ಆಕ್ರೋಶಗೊಂಡಿದ್ದ ಯುವಕರ ಗುಂಪು ಎರಡು ಬೈಕ್ ಗಳಲ್ಲಿ ಬಂದು ಹಲ್ಲೆ ನಡೆಸಿರುವುದಾಗಿ ಹೇಳಲಾಗಿದೆ.

ತೀವ್ರವಾಗಿಗಾಯಗೊಂಡ ಯಾಕೂಬ್ ಖಾನ್ ಕುತ್ತಿಗೆಗೆ 8 ಹೊಲಿಗೆ ಹಾಕಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.
ವೀರಾಜಪೇಟೆಯಲ್ಲಿ ಗಾಂಜಾ ವಹಿವಾಟು ಹೆಚ್ವುತ್ತಿದ್ದು, ಗಾಂಜಾ ವ್ಯಸನಿಗಳು ಮತ್ತು ಗಾಂಜಾ ಮಾರಾಟಗಾರರನ್ನು ಮಟ್ಟಹಾಕುವಂತೆ ಸ್ಥಳೀಯರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss