Tuesday, January 19, 2021

Latest Posts

ವಿರುಷ್ಕಾಗೆ ‘ಅಮುಲ್’ ಗಿಫ್ಟ್: ಅಭಿಮಾನಿಗಳು ಫುಲ್ ಖುಷ್!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೆಲವು ದಿನಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ‘ವಿರುಷ್ಕಾ’ ದಂಪತಿಗೆ ‘ಅಮುಲ್’ ತನ್ನ ಎಂದಿನ ಸ್ಟೈಲ್‌ನಲ್ಲಿ ಕಾರ್ಟೂನ್ ಮೂಲಕ ವಿಷ್ ಮಾಡಿದ್ದು, ವಿರುಷ್ಕಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ!
ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ತಮ್ಮ ಮಧ್ಯೆ ಇರುವ ಮಗುವನ್ನ ನೋಡುತ್ತಿರುವಂತೆ ಕಾರ್ಟೂನ್‌ನಲ್ಲಿ ಚಿತ್ರಿಸಲಾಗಿದೆ. ಅಲ್ಲದೆ ಈ ಕಾರ್ಟೂನ್‌ನ ಕೆಳಗೆ ಬರೆಯಲಾದ ‘ಈ ಡೆಲಿವರಿಯಿಂದ ಬೋಲ್ಡ್ ಆಗಿದ್ದೇವೆ. ಮನೆಗೆ ಸ್ವಾಗತ’ ಎಂಬ ಸಾಲುಗಳೂ ಮನಸೆಳೆಯುತ್ತಿದೆ.
ಈ ಕಾರ್ಟೂನ್ ಇನ್ಟ್ಟಾಗ್ರಾಮ್‌ನಲ್ಲಿ ಪೋಸ್ಟ್ ಆಗುತ್ತಿದ್ದಂತೆಯೇ ಮೆಚ್ಚುಗೆಯ ಸುರಿಮಳೆಯೇ ಸುರಿದಿದ್ದು, ಅಮುಲ್ ಮತ್ತೊಮ್ಮೆ ಜನಮಾನಸ ಗೆದ್ದಿದೆ.
ಆಗಸ್ಟ್ ತಿಂಗಳಲ್ಲಿ ಕೊಹ್ಲಿ ದಂಪತಿ ತಾವು ಪೋಷಕರಾಗುತ್ತಿದ್ದೇವೆ ಎಂಬ ವಿಚಾರವನ್ನ ಬಹಿರಂಗಪಡಿಸಿದಾಗ ‘ವಿರುಷ್ಕಾ ಓನ್ ದ ವೇ, ಬೆಣ್ಣೆ ಮಗನಿಗೋ ಮಗಳಿಗೋ’ ಎಂದು ಬರೆಯಲಾಗಿದ್ದ ಕಾರ್ಟೂನ್ ಅಮುಲ್ ಶೇರ್ ಮಾಡಿತ್ತು. ಇದೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವ್ರೈಲ್ ಆಗಿತ್ತು.

https://www.instagram.com/p/CJ-UAZTBVk6/?utm_source=ig_embed

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!