Thursday, June 30, 2022

Latest Posts

ವಿರೋಧದ ನಡುವೆ ಗಿಲ್ಗಿಟ್ -ಬಾಲ್ಟಿಸ್ತಾನದಲ್ಲಿ ಚುನಾವಣೆ: ಪಾಕ್ ಸರಕಾರಕ್ಕೆ ಮುಖಭಂಗ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಭಾರತದ ತೀವ್ರ ವಿರೋಧದ ನಡುವೆಯೂ ಗಿಲ್ಗಿಟ್ -ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಿದ ಪಾಕ್ ಸರ್ಕಾರ ತೀವ್ರ ಮುಖಭಂಗ ಅನುಭವಿಸಿದೆ!
ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ ವಿಧಾನಸಭೆಗೆ ಚುನಾವಣೆಯನ್ನು ಪಾಕ್ ಸರ್ಕಾರ ನಿನ್ನೆ ನಡೆಸಿತ್ತು. ಈ ಪ್ರಾಂತ್ಯ ಬಹುತೇಕ ಮಿಲಿಟರಿ ಹಿಡಿತದಲ್ಲಿದ್ದು, ಇಲ್ಲಿ 23 ಸ್ಥಾನಗಳಿಗೆ ಚುನಾವಣೆ ನಡೆಸಲಾಗಿತ್ತು. ಇದರ ಫಲಿತಾಂಶ ಪ್ರಕಟವಾಗಿದ್ದು, ಬಹುಮತ ಪ್ರಾಪ್ತಿಯಾಗದ ಕಾರಣ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್‌ಸಾಫ್ ಪಾರ್ಟಿ (ಪಿಟಿಐ)ಗೆ ಭಾರಿ ಮುಖಭಂಗವಾಗಿದೆ.
ಇಲ್ಲಿನ 23 ಸ್ಥಾನಗಳ ಪೈಕಿ 8 ರಿಂದ 9 ಸ್ಥಾನಗಳು ಪಿಟಿಐ ಹಾಗೂ 6 ರಿಂದ 7 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಕಂಡಿದ್ದಾರೆ. ಜಿಯೋ ಟಿವಿ ವರದಿ ಪ್ರಕಾರ, ಪಿಟಿಐಗೆ 8, ಪಿಪಿಪಿಗೆ 5, ಪಿಎಂಎಲ್-ಎನ್‌ಗೆ 2, ಜೆಐಯು-ಎಫ್‌ಗೆ , ಎಂಡಬ್ಲ್ಯುಎಂಗೆ ತಲಾ ಒಂದು ಸ್ಥಾನ ಸಿಕ್ಕಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss