Tuesday, July 5, 2022

Latest Posts

ವಿರೋಧ ಪಕ್ಷದವರಿಂದ ಅಪಪ್ರಚಾರ ಅಷ್ಟೇ ಬಿಜೆಪಿಯಲ್ಲಿ ಭಿನ್ನಮತವಿಲ್ಲ: ರವಿಕುಮಾರ್ ಸ್ಪಷ್ಟನೆ

ಕೋಲಾರ:  ವಿರೋಧ ಪಕ್ಷದ ಕೆಲ ನಾಯಕರು ಸರ್ಕಾರದ ವಿರುದ್ದ ಅಪಪ್ರಚಾರ ನಡೆಸುತ್ತಿದ್ದಾರೆ, ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ, ಯಡಿಯೂರಪ್ಪ ಅವರೇ ಪೂರ್ಣಾವಧಿ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಸ್ವಷ್ಟಪಡಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ಕೆಲ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಜನ ಅವರ ಮಾತುಗಳಿಗೆ ಕಿವಿಗೋಡುವುದಿಲ್ಲ ಎಂದರು.
ನಮ್ಮ ಪಕ್ಷದ ಶಾಸಕರೇ ಮಂತ್ರಿ ಸ್ಥಾನಬೇಕು ಎಂದು ಅಗ್ರಹಿಸಿರುವುದು ನಿಜ, ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಇನ್ನೂ ಸೂಚನೆ ನೀಡಿಲ್ಲ, ಈದೀಗ ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆ ನಡೆಯುತ್ತಿದ್ದು, ಟೀಕೆಟ್ ಬೇಕು ಎಂದು ಉಮೇಶ್ ಕತ್ತಿ ಬೇಡಿಕೆ ಇಟ್ಟಿದ್ದಾರೆ, ಅವರ ಕ್ಷೇತ್ರಕ್ಕೆ ಸೌಕರ್ಯ ಬೇಕು ಎಂಬ ಉದ್ದೇಶದಿಂದ ಕೇಳಿದ್ದಾರೆ, ಯತ್ನಾಳ್ ಮತ್ತು ಕತ್ತಿ ಇವರು ಮುಖ್ಯಮಂತ್ರಿ ಮನೆಗೆ ರೋಟಿ ತಿನ್ನಲು ಹೋಗಿದ್ದಾರು ಅಷ್ಟೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಕೊರೊನಾ ವೈರಸ್ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದೆ, ನರೇಂದ್ರ ಮೋದಿ ಆರಂಭದಲ್ಲಿ ಲಾಕ್‌ಡೌನ್ ಘೋಷಣೆ ಮಾಡುವ ಮೂಲಕ ವೈರಸ್ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡಿದರು, ನಂತರ ಹಂತಹಂತವಾಗಿ ಲಾಕ್‌ಡೌನ್‌ನ್ನು ಸಡಿಲಿಕೆ ಮಾಡಿದರು, ಆದರೂ ಜನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಇರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆಂತಕ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss