Wednesday, August 10, 2022

Latest Posts

‘ವಿಳ್ಯೆದೆಲೆ’ ಗೆ ಇದೆ ಕಾಯಿಲೆಗಳನ್ನು ನಾಶ ಮಾಡುವ ಶಕ್ತಿ.. ವಿಶ್ಯೆದೆಲೆಯ ಮಹತ್ವದ ಉಪಯೋಗಗಳು ನಿಮಗಾಗಿ

ಪ್ರತಿ ಮನೆಯಲ್ಲಿಯೂ ಶುಭ ಸಮಾರಂಭಗಳಿಗೆ ಬಳಸಲೇಬೇಕಾದ ಪೂಜಾ ಸಾಮಾಗ್ರಿಯಾದ ವಿಳ್ಯೆದೆಲೆಯಿಂದ ನಮ್ಮ ಆರೋಗ್ಯದ ಸಾಕಷ್ಟು ತೊಂದರೆಗಳನ್ನು ನಿವಾರಣೆ ಮಾಡುವ ಶಕ್ತಿ ಇದೆ.

ಊಟದ ನಂತರ ವಿಳ್ಯೆದೆಲೆ ತಿನ್ನುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ ಎಂದು ತಿಳಿದಿದ್ದರೂ, ವಿಳ್ಯೆದೆಲೆಯಲ್ಲಿ ಅನೇಕ ಕಾಯಿಲೆಗಳನ್ನು ನಾಶ ಮಾಡುವ ಸಾಮರ್ಥ್ಯಹೊಂದಿದೆ. ಇದನ್ನು ಓದಿ ನಮ್ಮವರಿಗೂ ಹಂಚಿ

ಗ್ಯಾಸ್ಟ್ರಿಕ್ ಸಮಸ್ಯೆ: ವಿಳ್ಯೆದೆಲೆ ತಿನ್ನುವುದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳೀಗೆ ರಾಮಬಾಣವಾಗಲಿದೆ.

ಉಸಿರಾಟದ ತೊಂದರೆ: ಯಾರಿಗಾದರೂ ಉಸಿರಾಟದ ತೊಂದರೆ ಯಾದರೆ ಎದೆಯ ಮೇಲೆ ಕೊಬ್ಬರಿ ಎಣ್ಣೆ ಹಚ್ಚಿ, ಬಳಿಕ ವಿಳ್ಯೆದೆಲೆಯನ್ನು ಬೆಚ್ಚಗೆ ಮಾಡಿ ಎದೆಯ ಮೇಲೆ ಇಟ್ಟರೆ ಉಸಿರಾಟದ ಸಮಸ್ಯೆ ನಿವಾರಣೆಯಾಗಲಿದೆ.

ನೆಗಡಿ,ಕೆಮ್ಮು,ಕಫ : ವಿಳ್ಯೆದೆಲೆ ರಸ, ಇಂದು, ಈರುಳ್ಳಿ ರಸ್ ಹಾಗೂ ಜೇನು ತುಪ್ಪ ಸೇರಿಸಿ ಕುಡಿದರೆ ನೆಗಡಿ, ಕೆಮ್ಮು ನಿವಾರಣೆಯಾಗಲಿದೆ.

ಕಜ್ಜಿ ತುರಿಕೆ: ವಿಳ್ಯೆದೆಲೆ ರಸಕ್ಕೆ ನಿಂಬೆ ರಸ ಸೇರಿಸಿ ಹಚ್ಚುವುದರಿಂದ ತುರಿಕೆ ಕಮ್ಮಿಯಾಗುತ್ತದೆ,

ಮುಖದ ಮೇಲಿನ ಮೊಡವೆ: ಮುಖದ ಮೇಲಿರುವ ಮೊಡವೆ ನಿವಾರಣೆ ಮಾಡಲು ವಿಳ್ಯೆದೆಲೆ ಹಾಗೂ ಅರಿಶಿನ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡೆಗಳು ನಿವಾರಣೆಯಾಗುತ್ತದೆ.

ಕೂದಲು ಉದುರುವಿಕೆ: ತೆಂಗಿನ ಎಣ್ಣೆಯಿಂದ ವಿಶ್ಯೆದೆಲೆಯನ್ನು ಚೆನ್ನಾಗಿ ರುಬ್ಬಿ ಅದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದರುವುದು ಕಡಿಮೆಯಾಗುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss