Saturday, June 25, 2022

Latest Posts

ವಿವಾದಾತ್ಮಕ ಹೇಳಿಕೆ ಬೆನ್ನಿಗೇ ಕಂಗನಾ ಟ್ವಿಟರ್ ಖಾತೆಗೆ ತಾತ್ಕಾಲಿಕ ಬೀಗ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

’ತಾಂಡವ್’ ಸೃಷ್ಟಿಕರ್ತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟ್ವೀಟ್ ಮಾಡಿ ಬಳಿಕ ಡಿಲೀಟ್ ಮಾಡಿದ ಬೆನ್ನಿಗೇ ನಟಿ ಕಂಗನಾ ರಣಾವತ್ ಟ್ವಿಟರ್ ಖಾತೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಕಂಗನಾ, ವೆಬ್‌ಸೀರಿಸ್‌ನಲ್ಲಿ ಹಿಂದೂ ದೇವರುಗಳಿಗೆ ಅವಮಾನ ಮಾಡಿದವರ ತಲೆಗಳನ್ನು ಕತ್ತರಿಸುವ ಸಮಯ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಹಿಂಸಾಚಾರಕ್ಕೆ ಕರೆ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಅಲ್ಲದೆ ಅವರ ಈ ಹೇಳಿಕೆ ಪರ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದರಲ್ಲದೆ, ನಟಿಯ ಖಾತೆಯನ್ನು ನಿರ್ಬಧಿಸುವಂತೆ ಹಲವು ಮಂದಿ ಟ್ವಿಟರ್‌ನಲ್ಲಿ ಮನವಿ ಮಾಡಿಕೊಂಡಿದ್ದರು. ಇದರ ಬೆನ್ನಿಗೇ ಕಂಗನಾ ತಿರುಗೇಟು ನೀಡಿ, ಒಂದು ವೇಳೆ ನನ್ನ ಟ್ವಿಟರ್ ಖಾತೆಗೆ ನಿರ್ಬಂಧ ಹೇರಿದರೆ ನನ್ನ ನಿಜ ರೂಪ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಈ ನಡುವೆಯೇ ಟ್ವಿಟರ್ ಆಕೆಯ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss