Wednesday, August 17, 2022

Latest Posts

ವಿವಾಹಕೋಸ್ಕರ ಮತಾಂತರ ನಿಷೇಧ ಕಾಯ್ದೆ ಸ್ವಾಗತಾರ್ಹ: ಟಿ.ಎಂ.ಶಾಹೀದ್

ಮಡಿಕೇರಿ: ವಿವಾಹಕೋಸ್ಕರ ಮತಾಂತರ ನಿಷೇಧ ಕಾಯ್ದೆಯನ್ನು ಮುಂದಾಗಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕ್ರಮ ಸ್ವಾತಾರ್ಹ ಎಂದಿರುವ ಕಾಂಗ್ರೆಸ್ ಮುಖಂಡ ಟಿ.ಎಂ.ಶಾಹಿದ್ ಅವರು, ಆದರೆ ಕಾನೂನು ತಜ್ಞರ ಸಲಹೆಯೊಂದಿಗೆ ಸಾಮಾಜಿಕ, ಧಾರ್ಮಿಕ ಮುಖಂಡರ ಸಲಹೆಯನ್ನೂ ಪಡೆದು ಎಲ್ಲಾ ಜಾತಿಯವರಿಗೆ ಅನುಕೂಲವಾಗುವ ಕಾನೂನನ್ನು ಸಂವಿಧಾನದ ಚೌಕಟ್ಟಿನ ಒಳಗೆ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಸರಕಾರ ಇದರ ಒಳಿತು ಕೆಡುಕುಗಳ ಬಗ್ಗೆ ತಿಳಿದು ಕಾನೂನು ಜಾರಿ ಮಾಡಬೇಕು. ಯಾವುದೇ ದಬ್ಬಾಳಿಕೆ ಮಾಡದೆ ಶಾಂತಿ ಮತ್ತು ಸೌರ್ಹಾದ ಸಮಾಜಕ್ಕೋಸ್ಕರ ಜಾರಿ ಮಾಡಬೇಕೇ ಹೊರತು ಯಾರದ್ದೋ ಒತ್ತಡದಿಂದ ಆಗಬಾರದು ಎಂದು ಅವರು ಹೇಳಿದ್ದಾರೆ.
ಲವ್ ಜಿಹಾದ್ ಬಗ್ಗೆ ಚರ್ಚೆಯಾಗುತ್ತಿದ್ದು, ಲವ್ ಜಿಹಾದ್ ಎಂಬುದು ಇಸ್ಲಾಂ ಧರ್ಮದಲ್ಲಿಲ.್ಲ ಇದು ಸಂಘ ಪರಿವಾರದವರ ಸೃಷ್ಟಿಯಾಗಿದೆ. ಬಾಬ್ರಿ ಮಸೀದಿ ವಿವಾದದ ಸಂಬಂಧ ಸುಪ್ರಿಂಕೋರ್ಟ್ ತೀರ್ಪು ನೀಡಿದಾಗಲೂ ಯಾವುದೇ ಮುಸಲ್ಮಾನ ತಕರಾರು ಎತ್ತದೆ ತೀರ್ಪನ್ನು ಗೌರವಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಎಸ್.ಡಿ.ಪಿ.ಐ.ಯನ್ನು ನಿಷೇಧ ಮಾಡುವುದಾಗಿ ಹೇಳಿಕೆ ನೀಡಿದ್ದು, ಇದುವರೆಗೂ ಅದನ್ನು ಮಾಡಿಲ್ಲ. ಆದ್ದರಿಂದ ಕೇವಲ ಪತ್ರಿಕಾ ಹೇಳಿಕೆಗಳಿಗೆ ಮಾತ್ರ ಸೀಮಿತವಾಗದೆ ಸ್ವಸ್ಥ ಸಮಾಜಕ್ಕಾಗಿ ಕೂಡಲೇ ವಿವಾಹಕೋಸ್ಕರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಬೇಕೆಂದು ಟಿ.ಎಂ.ಶಾಹೀದ್ ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!