Tuesday, July 5, 2022

Latest Posts

ವಿವಾಹಿತಳ ಅಪಹರಣಕ್ಕೆ ಯತ್ನ: ಮಾಜಿ ಪ್ರೇಮಿಗೆ ದರ್ಮದೇಟು

ಹೊಸ ದಿಗಂತ ವರದಿ, ಚಿತ್ರದುರ್ಗ:

ಗಂಡನ ಮನೆಯಿಂದ ತವರುಮನೆಗೆ ಬಂದಿದ್ದ ಮಹಿಳೆಯನ್ನು ಅಪಹರಿಸಲು ಯತ್ನಿಸಿದ ಅರೋಪಿ ಪ್ರತಾಪ್ ಹಾಗೂ ಆತನ ಸ್ನೇಹಿತರನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ಹೊಸಮುಚ್ಚುಗುಂಟೆ ಗ್ರಾಮದಲ್ಲಿ ನಡೆದಿದೆ.
ಆರೋಪಿ ಪ್ರತಾಪ್ ಈ ಮಹಿಳೆಯನ್ನು ಅವಳ ಮದುವೆಗೂ ಮುನ್ನ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಮನೆಗೆ ನುಗ್ಗಿ ಅವಳನ್ನು ಅಪಹರಣ ಮಾಡಲು ಅವನು ಸ್ನೇಹಿತರ ಜೊತೆಗೆ ಬಂದಿದ್ದ ಎಂದು ಆರೋಪಿಸಲಾಗಿದೆ. ಹೀಗೆ ಬಂದ ಪ್ರತಾಪ್ ಹಾಗೂ ಅವನ ಸ್ನೇಹಿತರನ್ನು ಮನೆಯವರು ಹಾಗೂ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ.
ಚಿಕ್ಕಮ್ಮನಹಳ್ಳಿಯ ಪ್ರತಾಪ್ ಹಾಗೂ ಇತರೆ ಮೂರು ಜನರ ವಿರುದ್ಧ ಮಹಿಳೆಯ ಸಂಬಂಧಿ ಯಶೋಧಮ್ಮ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಅಪಹರಣಕ್ಕೆ ಯತ್ನಿಸಿದ್ದ ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸುತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss