Sunday, June 26, 2022

Latest Posts

ವಿವಾಹಿತ ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೂವಿನ ವ್ಯಾಪಾರಿ

ಹೊಸದಿಗಂತ ವರದಿ, ಮಂಗಳೂರು

ಸುರತ್ಕಲ್ ಮುಕ್ಕ ಬಳಿ ಹೂವಿನ ವ್ಯಾಪಾರಿಯೊಬ್ಬ ವಿವಾಹಿತ ಮಹಿಳೆಯೊಬ್ಬರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಸುರತ್ಕಲ್ ಬಸ್ ನಿಲ್ದಾಣದ ಬಳಿ ಹೂವು ಮಾರಾಟ ನಡೆಸುತ್ತಿದ್ದ ಕುಳಾಯಿ ನಿವಾಸಿ ವಸಂತ ಕುಮಾರ್ (36) ಎಂಬಾತ ತನ್ನ ಪರಿಚಯದ 42ವರ್ಷ ಪ್ರಾಯದ ವಿವಾಹಿತ ಮಹಿಳೆಯನ್ನು ಮುಕ್ಕದ ತನ್ನ ಬಾಡಿಗೆ ಮನೆಯಲ್ಲಿ ಕೊಂದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಮಂಗಳವಾರ ಮಧ್ಯಾಹ್ನ ಬಳಿಕ ನಡೆದಿದೆ ಎಂದು ಶಂಕಿಸಲಾಗಿದೆ.

ಕೊಲೆ ಮತ್ತು ಆತ್ಮಹತ್ಯೆ ನಡೆದ ಮನೆಯಲ್ಲಿ ಬಲಿ ನೀಡಿದ ಕೋಳಿ, ಲಿಂಬೆಹುಳಿ, ಕುಂಬಳಕಾಯಿ ಪತ್ತೆಯಾಗಿದೆ. ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss