ಹೊಸದಿಗಂತ ಆನ್ ಲೈನ್ ಡೆಸ್ಕ್:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಿತು.
ಸಭೆಯ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ಅನುಕಂಪ ಆಧಾರಿತ ಸರ್ಕಾರಿ ನೌಕರಿ ನೀಡಲು ನಿಯಮಾವಳಿ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ. ಮೃತ ಸರ್ಕಾರಿ ನೌಕರನಿಗೆ ಒಂದು ವೇಳೆ ತಂದೆ-ತಾಯಿ ಇಲ್ಲದಿದ್ದರೆ ಅವರನ್ನು ಪೋಷಣೆ ಮಾಡುತ್ತಿದ್ದವರಿಗೆ ಸರ್ಕಾರಿ ನೌಕರಿ ಕೊಡಬಹುದು. ಗಂಡು ಮಕ್ಕಳು ಇಲ್ಲದಿದ್ದಲ್ಲಿ ಹೆಣ್ಣು ಮಗಳಿಗೆ ಮದುವೆಯಾಗಿದ್ದರೂ ಕೂಡ ಅನುಕಂಪದ ಆಧಾರದಲ್ಲಿ ನೌಕರಿ ಕೊಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯಗಳು
- 5.5 ಲಕ್ಷ ಮನೆಗಳಿಗೆ ಗೃಹ ಶೌಚಾಲಯ ನಿರ್ಮಾಣಕ್ಕೆ ಶೇ. 70ರಷ್ಟು ಅನುದಾನ.
- ಕರ್ನಾಟಕ ನಗರ ಗ್ರಾಮಾಂತರ ಯೋಜನೆ ವಿಧೇಯಕ ಮಂಡನೆಗೆ ಸಂಪುಟ ಸಭೆ ಅನುಮೋದನೆ.
- ಆರ್ಡಿಪಿಆರ್ ಇಲಾಖೆಯ ಸ್ವಚ್ಛ ಭಾರತ್ ಮಿಷನ್ ಯೋಜನೆ 2ಕ್ಕೆ ರಾಜ್ಯ ಸರ್ಕಾರ ಅನುಮೋದನೆ.
- ಟೌನ್ ಆಂಡ್ ಕಂಟ್ರಿ ಪ್ಲಾನ್ ನಲ್ಲಿ ಹೆಚ್ಚಿನ ಎಫ್.ಎ. ಆರ್ ಕೊಡಲು ಅವಕಾಶ ಮಾಡಿಕೊಡುವ ವಿಧೇಯಕ.
- ಸರ್ಕಾರಿ ನೌಕರರ ಅನುಕಂಪ ಆಧಾರಿತ ನೌಕರಿ ನೀಡಲು ನಿಯಮಾವಳಿ ತಿದ್ದುಪಡಿ.
- ಸ್ಥಳೀಯ ಸಂಸ್ಥೆಗಳಿಗೆ ಬೆಲೆ ನಿಗದಿ ಮಾಡಿಕೊಳ್ಳಲು ಅಧಿಕಾರ.
- ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ 31 ಕೋಟಿ ದುಡಿಮೆ ಬಂಡವಾಳ ಸಾಲ ಪಡೆಯಲು ಬ್ಯಾಂಕ್ ಗ್ಯಾರಂಟಿ ಒಂದು ವರ್ಷ ಮುಂದುವರಿಕೆ
- 224 ತಾಲೂಕು ಪಂಚಾಯ್ತಿ ಕಚೇರಿಗಳು 5 ಪ್ರಾದೇಶಿಕ ಆಯುಕ್ತರ ಕಚೇರಿಗಳಿಗೆ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ನೀಡಲು 35 ಕೋಟಿ ರೂ.ಬಿಡುಗಡೆ
- ವಿಕಲಚೇತನರಿಗೆ ತ್ರಿಚಕ್ರ ವಾಹನ ಖರೀದಿಗೆ ಟೆಂಡರ್ ಕರೆಯಲು ಅನುಮೋದನೆ.
- ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ 9 ಕೆರೆ ಹಾಗೂ ಕಟ್ಟೆಗಳ ತುಂಬಿಸುವ 14 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ.
- ಅಂಗನವಾಡಿ ಹೆಲ್ಪರ್ಸ್ಗೆ ಸಮವಸ್ತ್ರ ಕೊಡಲು ಕೆ.ಹೆಚ್.ಡಿ.ಸಿ ಯಿಂದ ಸೀರೆ ಕೊಡಲು ₹10 ಕೋಟಿ 27 ಲಕ್ಷ ವೆಚ್ಚದಲ್ಲಿ ಖರೀದಿಸಿಲು ಅನುಮೋದನೆ, ಇದರಿಂದ ಒಟ್ಟು ಒಂದು ಲಕ್ಷದ ಮೂವತ್ತು ಸಾವಿರ ಫಲಾನುಭವಿಗಳಿಗೆ ಅನುಕೂಲ ಆಗಲಿದೆ.
- ದಾವಣಗೆರೆ ಜಿಲ್ಲೆ ಹೊನ್ನಾಳಿಯ ಬೆನಕೇನಹಳ್ಳಿ ಏತ ನೀರಾವರಿ ಯೋಜನೆಯ 19 ಕೆರೆ ತುಂಬಿಸುವ ಕಾಮಗಾರಿಗೆ ಅನಮೋದನೆ, 48 ಕೋಟಿ ರೂ ಅನುದಾನ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ.