Tuesday, July 5, 2022

Latest Posts

ವಿವಿಧ ಉದ್ಯಮಿಗಳಿಗೆ ಬೆದರಿಕೆ ಆರೋಪ: ಬಚ್ಚಾಖಾನ್ ಮೈಸೂರು ಜೈಲಿಗೆ ಹಸ್ತಾಂತರ

ಹೊಸ ದಿಗಂತ, ಧಾರವಾಡ:

ಉದ್ಯಮಿಗಳಿಗೆ ಬೆದರಿಕೆ ಹಾಕಿದ ಆರೋಪದಡಿ ಭೂಗತ ಪಾತಕಿ ಯೂಸುಪ್ ಬಚ್ಚಾಖಾನ್ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ವಶದ ಅವಧಿ ಮುಗಿದ ಹಿನ್ನಲೆ ಇಲ್ಲಿನ ಪ್ರಧಾನ ಜಿಲ್ಲಾ ಜೆಎಂಎಫ್‌ಸಿ ನ್ಯಾಯಾಲಯ ಮೈಸೂರು ಜೈಲಿಗೆ ಹಸ್ತಾಂತರಿಸಲು ಆದೇಶಿಸಿದೆ.
ನಾಲ್ಕು ದಿನ ಸುಧೀರ್ಘ ವಿಚಾರಣೆ ನಡೆಸಿದ ಉಪನಗರ ಠಾಣೆಯ ಪೊಲೀಸರು, ಕಸ್ಟಡಿ ಅವದಿ ಮುಗಿದ ಹಿನ್ನಲೆ ಗುರುವಾರ ಸಂಜೆ ಪೊಲೀಸ ಭದ್ರತೆಯಲ್ಲಿ ಯೂಸುಫ್ ಬಚ್ಚಾಖಾನ್‌ನ್ನು ನ್ಯಾಯಾಲಯದ ಮುಂದೆ ಹಾಜರಪಡಿಸಿ ನ್ಯಾಯಾಂಗದ ವಶಕ್ಕೆ ಪಡೆಯಲು ಮನವಿ ಮಾಡಿದರು.
ಭೂಗತ ಪಾತಕ ಲೋಕದ ನಂಟು ಹೊಂದಿ, ಸದ್ಯ ಬಿಲ್ಡರ್ ಸುಬ್ಬರಾಜು ಕೊಲೆ ಪ್ರಕರಣದಲ್ಲಿ ಮೈಸೂರು ಜೈಲಿನಲ್ಲಿದ್ದ ಬಚ್ಚಾಖಾನ್, ಅಪಾರ ಹಣ ಗಳಿಸಿದ ಕುಳಗಳಿಗೆ ಅಪ್ತಾ ನೀಡದ ಕಾರಣ ಜೈಲಿನಲ್ಲಿದ್ದೇ ಬೆದರಿಕೆ ಹಾಕಿದ್ದಾನೆಂಬ ಹಲವು ದೂರುಗಳು ಬಂದಿದ್ದವು.
ಒಂದು ತಿಂಗಳಲ್ಲಿ ಹುಬ್ಬಳ್ಳಿ-ಧಾರವಾಡ ಉದ್ಯಮಿಗಳಿಗೆ ರಾಜಕೀಯ ನಾಯಕರಿಗೆ, ಕೆಲವು ಬಿಲ್ಡರ್‌ಗಳಿಗೆ ಬೆದರಿಕೆ ಹಾಕಿದ ಆರೋಪದಡಿ ಡಿ.27ರಂದು ಮೈಸೂರು ಕಾರಾಗೃಹದಿಂದ ಕರೆತಂದ ಬಚ್ಚಾಖಾನ್‌ನ್ನು ಡಿ.31ರವರೆಗೆ ಉಪನಗರ ಠಾಣೆ ಪೊಲೀಸ ಕಸ್ಡಡಿಗೆ ನೀಡಿತ್ತು.
ವಶಕ್ಕೆ ಪಡೆದ ನ್ಯಾಯಾಲಯ ಮೈಸೂರು ಜೈಲಿಗೆ ಹಸ್ತಾಂತರಿಸಲು ಆದೇಶಿಸಿದೆ. ದೂರವಾಣಿ ಕರೆ ಆಧರಿಸಿ ಬಚ್ಚಾಖಾನನ್ನು ವಿಚಾರಣೆ ನಡೆಸಿದ ಪೊಲೀಸರು ಹಲವು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಪ್ರಕರಣ ಇನ್ಮುಂದೆ ಯಾವ ತಿರುವು ಪಡೆಯಲಿದೆ ಕಾದುನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss