ವಿವೇಕಾನಂದರು ಕನ್ಯಾಕುಮಾರಿ ಬಂಡೆಯ ಮೇಲೆ ಕುಳಿತು ಯೋಚಿಸಿದ್ದು ಏನು?

0
256

ಬೆಂಗಳೂರು: ಬೆಂಗಳೂರಿನ ಬ್ಯೂಗಲ್ ರಾಕ್ ಪಾರ್ಕ್ ನಲ್ಲಿ ರಾಕ್ ಡೇ ಆಚರಣೆ.

ವಿವೇಕಾನಂದರು ಕನ್ಯಾಕುಮಾರಿಯ ಬಂಡೆ ಮೇಲೆ ಕುಳಿತು ಧ್ಯಾನಿಸಿದ ದಿನವನ್ನು ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ  ರಾಕ್ ಡೇ ಎಂಬ ಪರಿಕಲ್ಪನೆಯೊಂದಿಗೆ ವಿವೇಕ ಮಾಲೆ ಧಾರಣೆಯ ಕಾರ್ಯಕ್ರಮ ಆಯೋಜಿಸಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಕ್ರಮ ವಾರ ಪತ್ರಿಕೆಯ ಸಹ ಸಂಪಾದಕರಾದ ನಾ.ನಾಗರಾಜ್ ಅವರು ಯುವಕರು ಕರ್ಮಶಕ್ತಿ ಮತ್ತು ಕ್ರಿಯಾಶಕ್ತಿಯ ಕುರಿತು ಆಲೋಚಿಸಬೇಕು ಮತ್ತು ತಮ್ಮೊಳಗಿನ ಸ್ವಾರ್ಥನನ್ನು ಮರೆತು ಶ್ರೀಕೃಷ್ಣನಂತೆ ಕ್ರಿಯಾತ್ಮಕವಾಗಿ  ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಯುವಾ ಬ್ರಿಗೇಡ್ ನ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆರವರು ರಾಕ್ ಡೇ ಮತ್ತು ವಿವೇಕ ಮಾಲೆಯ ವೈಶಿಷ್ಟ್ಯವನ್ನು ತಿಳಿಸಿ, ನೆರೆದಿದ್ದವರಿಗೆ ಸ್ಪೂರ್ತಿ ನೀಡಿದರು. ರಾಮಕೃಷ್ಣ ಆಶ್ರಮದ ಸಂತರಿಂದ ವಿವೇಕ ಮಾಲಾಧಾರಿಗಳಿಗೆ ಮಾಲೆಗಳನ್ನು ವಿತರಿಸಲಾಯಿತು. ಡಿ.26 ರಿಂದ ಜನವರಿ 12 ರವರೆಗೆ ವಿವೇಕ ಮಾಲಾಧಾರಿಗಳು ವ್ಯಾಯಾಮ, ಧ್ಯಾನ, ಅಧ್ಯಯನ ಮುಂತಾದ ದೈಹಿಕ ಮತ್ತು ಬೌದ್ಧಿಕ ವಿಚಾರಗಳನ್ನು ಪಾಲಿಸುವುದು ವಿವೇಕ ಮಾಲೆಯ ನಿಯಮವಾಗಿದೆ.

ರಾಮಕೃಷ್ಣ ಪರಮಹಂಸರ ಶಿಷ್ಯ ಸ್ವಾಮಿ ವಿವೇಕಾನಂದರು ಭಾರತ ಪರ್ಯಟನೆಯ ನಂತರ ಕನ್ಯಾಕುಮಾರಿಯ ದಡದಲ್ಲಿ ನಿಂತು ಕಣ್ಣೀರಿಟ್ಟ ದಿನ ಡಿ. 24-1892. ನಂತರ ಸ್ವಾಮಿ ವಿವೇಕಾನಂದರು ಸಮುದ್ರದಲ್ಲಿ ಈಜಿ ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತು ದೇಶದ ಏಳಿಗೆಗಾಗಿ ಧ್ಯಾನ ಮಾಡಿದ ದಿನ ಡಿ.25-1892. ನಂತರ ವಿವೇಕಾನಂದರು ಚಿಕಾಗೋದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ತೀರ್ಮಾನಿಸಿದರು.

LEAVE A REPLY

Please enter your comment!
Please enter your name here