Friday, July 1, 2022

Latest Posts

ವಿಶಾಖಪಟ್ಟಣಂನ ಅನಿಲ ದುರಂತ| ರಾಜ್ಯದಲ್ಲಿರುವ ಅನಿಲ ಘಟಕಗಳ ಮೇಲೆ ಸೂಕ್ಷ ನಿಗಾ

ಮೈಸೂರು: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಎಲ್ಜಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ನಡೆದ ಅನಿಲ ಸೋರಿಕೆ ದುರಂತ ಘಟನೆಯ ಹಿನ್ನಲೆಯಲ್ಲಿ ರಾಜ್ಯದಲ್ಲಿ ಅನಿಲ ಘಟಕಗಳ ಮೇಲೆ ಸೂಕ್ಷ÷್ಮ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಸಾಕಷ್ಟು ಮುನ್ನೇಚ್ಚರಿಕೆ ವಹಿಸಲಾಗಿದೆ. ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಶುಕ್ರವಾರ ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೈಗಾರಿಕೆಗಳ ಉದ್ಯಮಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಅನಿಲ ಘಟಕಗಳ ಬಗ್ಗೆ ಅಧಿಕಾರಿಗಳು ಸೂಕ್ಷ÷್ಮ ನಿಗಾ ಇಟ್ಟಿದ್ದಾರೆ. ಆಯಾ ಕೈಗಾರಿಕೆಗಳು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿ, ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಇಡೀ ವಿಶ್ವಕ್ಕೆ ಕೊರೋನಾ ವೈರಸ್ ಹರಡಿ, ಸಾವು, ನೋವುಗಳುಂಟಾಗಲು ಕಾರಣವಾಗಿರುವ ಚೀನಾದ ವಿರುದ್ಧ ಹಲವು ದೇಶಗಳು ಆಕ್ರೋಶ ವ್ಯಕ್ತಪಡಿಸಿದ್ದು, ಅಲ್ಲಿರುವ ಕೈಗಾರಿಕೆಗಳನ್ನು ತೆರವುಗೊಳಿಸಲು ಇಚ್ಛೆಪಡುತ್ತಿವೆ. ಈ ಸಂದರ್ಭದಲ್ಲಿ ಅಂತಹ ಕೈಗಾರಿಕೆಗಳನ್ನು ಭಾರತಕ್ಕೆ ಸೆಳೆಯಲಾಗುವುದು. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ವಿಶೇಷವಾಗಿ ಪ್ಯಾಕೇಜ್ ಘೋಷಣೆ ಮಾಡುವ ವಿಶ್ವಾಸವಿದೆ. ಎಂದು ಹೇಳಿದರು.
ಮೂಲ ಸಿಕ್ಕಿಲ್ಲ : ಮೈಸೂರು ಜಿಲ್ಲೆಯ ನಂಜನಗೂಡಿನ ಜುಬಿಲಂಟ್ ಔಷಧ ಕಾರ್ಖಾನೆಯ ನೌಕರನಿಗೆ ಕೊರೊನಾ ಸೋಂಕು ಹೇಗೆ ತಗುಲಿದೆ ಎಂಬುದರ ಬಗ್ಗೆ ತನಿಖೆ ನಡೆದಿದೆ. ಆದರೆ ಅದರ ಮೂಲ ಸಿಕ್ಕಿಲ್ಲ. ಮುಂದೊAದು ದಿನ ಸಿಗಲಿದೆ. ತನಿಖೆಗಿಂತ ಮೈಸೂರನ್ನು ಕೊರೊನಾ ಮುಕ್ತ ಮಾಡುವುದು ನಮ್ಮ ಮೊದಲ ಆದ್ಯತೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss