ವಿಶಾಖಪಟ್ಟಣಂ: ಕಳೆದ 18 ದಿನಗಳಿಂದ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದ 4 ತಿಂಗಳ ಮಗು ಗುಣಮುಖವಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.
ಆಂಧ್ರಪ್ರದೇಶದ ಬುಡಕಟ್ಟು ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟ ಬಳಿಕ ಆಕೆಯ 4 ತಿಂಗಳ ಮಗುವಿಗೂ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವಿನಯ್ ಚಂದ್ ತಿಳಿಸಿದ್ದಾರೆ.
ಮೇ 25 ರಂದು ಕೊರೋನಾ ಚಿಕಿತ್ಸೆ ಗೆ ವಿಶಾಖಪಟ್ಟಣದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ 18ದಿನಗಳ ಕಾಲ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆದ ಮಗುವಿನ ಇತ್ತೀಇನ ಕೊರೋನಾ ವರದಿ ನೆಗಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರದ ವರದಿ ಪ್ರಕಾರ ವಿಶಾಖಪಟ್ಟಣಂ ನಲ್ಲಿ 14 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 252 ಕೊರೋನಾ ಪ್ರಕರಣಗಳಾಗಿವೆ ಎಂದು ವರದಿ ತಿಳಿಸಿದೆ.