Monday, July 4, 2022

Latest Posts

ವಿಶಾಖಪಟ್ಟಣದಲ್ಲಿ ನಿಲ್ಲದ ಅನಿಲ ಸೋರಿಕೆ: ಸುತ್ತಮುತ್ತಲಿನ ಜನರ ಸ್ಥಳಾಂತರ  

ವಿಶಾಖಪಟ್ಟಣ: ಎಲ್.ಜಿ ಪೊಲಿಮರ್ಸ್ ರಾಸಾಯನಿಕ ಕಾರ್ಖಾನೆಯಿಂದ ಕಳೆದ ರಾತ್ರಿ ಮತ್ತೆ ಅನಿಲ ಸೋರಿಕೆಯಾಗಿದೆ.

ನೆನ್ನೆ ಬೆಳಗೆಯಷ್ಟೆ ವಿಷನಿಲ ಸೋರಿಕೆಯಾಗಿ 11ಮಂದಿ ಮೃತಪಟ್ಟಿದ್ದು, ಸೂರಾರು ಮಂದಿ ಅಸ್ವಸ್ಥರಾಗಿದ್ದು, ಮತ್ತೊಂದು ಭೋಪಾಲ್ ಅವಘಡವನ್ನು ನೆನಪಿಸಿತ್ತು, ಆದರೆ ಇದೀಗ ಅದಕ್ಕೆ ಮತ್ತೆ ಸಾಥ್ ನೀಡುವಂತೆ ಗುರುವಾರ ರಾತ್ರಿ ಮತ್ತೆ ಅನಿಲ ಸೊರಿಕೆಯಾಗಿದ್ದು, 50 ಅಗ್ನಿ ಶಾಮಕ ಸಿಬ್ಬಂದಿಗಳು, ಎನ್ ಡಿ ಆರ್.ಎಫ್ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಅನಿಲ ಸೋರಿಕೆ ಆಗಿರುವ ನಿಟ್ಟಿನಲ್ಲಿ ಸುತ್ತಮುತ್ತಲಿನ 2-3 ಕಿ.ಮೀ ಅಂತರದಲ್ಲಿರುವ ಎಲ್ಲರನ್ನೂ ಸ್ಥಳಾಂತರಿಸಲಾಗಿದೆ ಎಂದು ವಿಶಾಖಪಟ್ಟಣದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸಂದೀಪ್ ಆನಂತ್ ತಿಳಿಸಿರುವುದಾಗಿ ವರದಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss