spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಶಾಖಪಟ್ಟಣ ಎಲ್‌ಜಿ ಕಾರ್ಖಾನೆ ಜಪ್ತಿ: ಎಲ್ಲ ನಿರ್ದೇಶಕರ ಪಾಸ್‌ಪೋರ್ಟ್ ವಶಕ್ಕೆ ಹೈಕೋರ್ಟ್ ಆದೇಶ      

- Advertisement -Nitte
ಅಮರಾವತಿ:  ಎರಡು  ವಾರಗಳ  ಹಿಂದೆ  ವಿಶಾಖಪಟ್ಟಣದಲ್ಲಿ ರಾಸಾಯನಿಕ ಸೋರಿಕೆಯಿಂದ ಅಮಾಯಕರ ಸಾವು ನೋವಿಗೆ ಕಾರಣವಾದ  ಎಲ್‌ಜಿ ಪಾಲಿಮರ್‍ಸ್  ಕಾರ್ಖಾನೆ  ಜಪ್ತಿಗೊಳಿಸಲು  ಆಂಧ್ರ  ಹೈಕೋರ್ಟ್  ಆದೇಶಿಸಿದೆ.
ಸುಮೋಟೋ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಹೈಕೋರ್ಟ್, ಕಾರ್ಖಾನೆಯ ಎಲ್ಲ  ನಿರ್ದೇಶಕರ  ಪಾಸ್‌ಪೋರ್ಟ್   ವಶಪಡಿಸಿಕೊಳ್ಳಲು   ಸ್ಥಳೀಯ  ಪೊಲೀಸರಿಗೆ   ಆದೇಶಿಸಿದೆ.  ನ್ಯಾಯಪೀಠದ  ಮುಂದಿನ  ಆದೇಶದವರೆಗೆ  ಕಾರ್ಖಾನೆಯ ಯಾವುದೇ  ಚಟುವಟಿಕೆಗಳನ್ನು  ಆರಂಭಿಸುವಂತಿಲ್ಲ ಎಂದು ನ್ಯಾಯಪೀಠ  ಆದೇಶಿಸಿದೆ.
  ವಿಶಾಖಪಟ್ಟಣಕ್ಕೆ   ಐದು  ಕಿಲೋಮೀಟರ್  ದೂರದ   ವೆಂಕಟಾಪುರದಲ್ಲಿರುವ  ಎಲ್ ಜಿ   ಪಾಲಿಮರ್‍ಸ್ ಕಾರ್ಖಾನೆಯಲ್ಲಿ   ಸಂಭವಿಸಿದ  ರಾಸಾಯನಿಕ ಸೋರಿಕೆಯಿಂದ  14ಕ್ಕೂ  ಅಧಿಕ ಮಂದಿ  ಸಾವಿಗೀಡಾಗಿ  ಸುಮಾರು 300 ಕ್ಕೂ  ಹೆಚ್ಚಿನ  ಮಂದಿ ಆಸ್ಪತ್ರೆಗಳಲ್ಲಿ  ಚಿಕಿತ್ಸೆ  ಹೊಂದುತ್ತಿದ್ದಾರೆ.  ಕೊರಿಯಾ  ದೇಶಕ್ಕೆ  ಸೇರಿದ  ಈ  ಕಂಪನಿ ಆಡಳಿತ ವರ್ಗ, ಸಂತ್ರಸ್ತರಿಗೆ ಪರಿಹಾರ  ನೀಡುವಂತೆ   ಹಸಿರು  ನ್ಯಾಯಾಧಿಕರಣ ಕೂಡಾ  ಪ್ರತ್ಯೇಕ  ಆದೇಶವೊಂದನ್ನು  ಈಗಾಗಲೇ   ಜಾರಿಗೊಳಿಸಿದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss